ಮುಸ್ಲಿಂ ಮಹಿಳೆಯರ ಸಂಕಟಕ್ಕೆ ಇಂದು ತೆರೆ ಎಳೀತಾರಾ ಪ್ರಧಾನಿ ಮೋದಿ?

ಶುಕ್ರವಾರ, 15 ಡಿಸೆಂಬರ್ 2017 (10:05 IST)
ನವದೆಹಲಿ: ಪ್ರಧಾನಿ ಮೋದಿ ನೇತೃತ್ವದಲ್ಲಿ ಇಂದು ಕೇಂದ್ರ ಸಚಿವ ಸಂಪುಟ ಸಭೆ ನಡೆಯಲಿದ್ದು, ತ್ರಿವಳಿ ತಲಾಖ್ ಕುರಿತ ಮಸೂದೆಗೆ ಸಂಪುಟದ ಅಂಗೀಕಾರ ಪಡೆಯುವ ನಿರೀಕ್ಷೆಯಿದೆ.
 

ಸಂಸತ್ತಿನಲ್ಲಿ ಮಸೂದೆ ಮಂಡನೆಯಾಗುವ ಮೊದಲು ಸಂಪುಟದ ಅಂಗೀಕಾರ ಪಡೆಯಬೇಕಾಗುತ್ತದೆ. ಹೀಗಾಗಿ ಇಂದು ಪ್ರಧಾನಿ ನೇತೃತ್ವದಲ್ಲಿ ನಡೆಯಲಿರುವ ಸಂಪುಟ ಸಭೆ ಮಹತ್ವದ್ದಾಗಿದೆ.

ಮುಸ್ಲಿಂ ಮಹಿಳೆಯರಿಗೆ ಅನುಕೂಲವಾಗುವಂತ ಮಸೂದೆ ಮಂಡಿಸುವುದಾಗಿ ಇದಕ್ಕೂ ಮೊದಲೇ ಕೇಂದ್ರ ಭರವಸೆ ನೀಡಿತ್ತು. ಸುಪ್ರೀಂ ಕೋರ್ಟ್ ನ ಆದೇಶದಂತೆ ಕೇಂದ್ರ ಸರ್ಕಾರ ತ್ರಿವಳಿ ತಲಾಖ್ ಗೆ ಹೊಸ ಮಸೂದೆ ಮಂಡಿಸುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ