ಕೋಳಿಗೂ ಟಿಕೆಟ್ ನೀಡಿದ ಬಸ್ ಕಂಡೆಕ್ಟರ್. ಅದಕ್ಕಾಗಿ ಕೋಳಿ ಮಾಲೀಕ ಮಾಡಿದ್ದೇನು ಗೊತ್ತಾ?

ಶುಕ್ರವಾರ, 10 ಮೇ 2019 (09:06 IST)
ಕೋಲಾರ : ಮಾಲೀಕನ ಜೊತೆ ಪ್ರಯಾಣಿಸುತ್ತಿದ್ದ ಕೋಳಿಗೂ ನಿರ್ವಾಹಕ ಟಿಕೆಟ್ ನೀಡಿದ ಘಟನೆ ಕೋಲಾರದಲ್ಲಿ ಕೆ.ಎಸ್‍.ಆರ್. ಟಿ.ಸಿ. ಬಸ್ ವೊಂದರಲ್ಲಿ ನಡೆದಿದೆ.



ಮಾಲೀಕನನೊಬ್ಬ ತನ್ನ ಕೋಳಿಯನ್ನು ತೆಗೆದುಕೊಂಡು ಕೆ.ಎಸ್‍.ಆರ್. ಟಿ.ಸಿ. ಬಸ್ ಹತ್ತಿದ್ದಾನೆ. ಈ ವೇಳೆ ನಿರ್ವಾಹಕ ಕೋಳಿಗೂ 15 ರೂ. ಟಿಕೆಟ್ ನೀಡಿದ್ದಾರೆ. ಈ ಟಿಕೆಟ್ ಪಡೆದ ಮಾಲೀಕ ಕೋಳಿಯನ್ನು ಸೀಟ್ ಮೇಲೆಯೇ ಕೂರಿಸಿ ಪ್ರಯಾಣಿಸಿದ್ದಾನೆ.

 

ಪ್ರಯಾಣಿಕರು ಕೋಳಿಯನ್ನು ತೆಗೆದು ಸೀಟ್ ಬಿಟ್ಟು ಕೊಡಿ ಎಂದು ಕೇಳಿದಾಗ, ತಾನು ಕೋಳಿಗೂ ಟಿಕೆಟ್ ಪಡೆದಿರುವುದಾಗಿ ಹೇಳಿದ್ದಾನೆ. ಸದ್ಯ ಕೋಳಿಯ ಟಿಕೆಟ್ ಮತ್ತು ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ