ದಸರಾ ನಿಮಿತ್ತ ಬಸ್ ಟಿಕೆಟ್ ಗೆ ದುಪ್ಪಟ್ಟು ದರ

ಭಾನುವಾರ, 15 ಅಕ್ಟೋಬರ್ 2023 (09:40 IST)
ಬೆಂಗಳೂರು: ಈ ವಾರಂತ್ಯದಲ್ಲಿ ದಸರಾ ಹಬ್ಬದ ನಿಮಿತ್ತ ಸಾಲು ಸಾಲು ರಜೆಗಳಿದ್ದು, ಅನೇಕರು ಬೆಂಗಳೂರಿನಿಂದ ತಮ್ಮ ಊರಿಗೆ ತೆರಳುವ ಧಾವಂತದಲ್ಲಿದ್ದಾರೆ.

ಈ ನಡುವೆ ಕೆಎಸ್ ಆರ್ ಟಿಸಿ ಬಸ್ ಗಳ ಟಿಕೆಟ್ ಗಳು ಈಗಾಗಲೇ ಸೋಲ್ಡ್ ಔಟ್ ಆಗಿವೆ. ಜೊತೆಗೆ ಮಹಿಳೆಯರಿಗೆ ಉಚಿತ ಪ್ರಯಾಣದ ಅನುಕೂಲವೂ ಇರುವುದರಿಂದ ಬಸ್ ಗಳಲ್ಲಿ ಟಿಕೆಟ್ ಸಿಗದ ಪರಿಸ್ಥಿತಿಯಾಗಿದೆ.

ಇದರ ನಡುವೆ ಖಾಸಗಿ ಬಸ್ ಗಳು ದುಪ್ಪಟ್ಟು ದರ ವಸೂಲಿಗೆ ಇಳಿದಿವೆ. 850 ರೂ. ಇರುವ ಟಿಕೆಟ್ ದರ ಖಾಸಗಿ ಬಸ್ ಗಳಲ್ಲಿ 1600 ರೂ. ವರೆಗೆ ತಲುಪಿದೆ! ಈ ನಡುವೆ ಕೆಎಸ್ ಆರ್ ಟಿಸಿ ಹೆಚ್ಚುವರಿ ಬಸ್ ಗಳನ್ನು ನಿಯೋಜಿಸಿದರೂ ಅಲ್ಲೂ ಟಿಕೆಗಳು ಬಿಸಿ ದೋಸೆಯಂತೆ ಕ್ಷಣದಲ್ಲಿ ಖಾಲಿಯಾಗುತ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ