ಸೋರುತ್ತಿರೋ ಬಸ್ : ಹಿಗ್ಗಾಮುಗ್ಗಾ ಉಗಿಯುತ್ತಿರೋ ಪ್ರಯಾಣಿಕರು

ಗುರುವಾರ, 10 ಅಕ್ಟೋಬರ್ 2019 (13:00 IST)
ಸಾರಿಗೆ ಇಲಾಖೆಯ ಬಸ್ ಮಳೆ ನೀರಿಗೆ ಸೋರುತ್ತಿದ್ದು, ಅವುಗಳಲ್ಲೇ ಪ್ರಯಾಣಿಸುತ್ತಿರುವ ಜನರು ಕ್ಯಾಕರಿಸಿ ಉಗಿಯುತ್ತಿದ್ದಾರೆ.

ಧಾರವಾಡ ಜಿಲ್ಲೆಯಲ್ಲಿ ಮತ್ತೆ ಕಳೆದ ಮೂರು ನಾಲ್ಕು ದಿನಗಳಿಂದ ಮಳೆಯಾಗುತ್ತಿದ್ದು, ಜನರು ಮಳೆಗೆ ತತ್ತರಿಸಿ ಹೋಗಿದ್ದಾರೆ.

ಈ ಬಾರಿ ಮನೆ, ಮಠಗಳು ಅಷ್ಟೇ ಅಲ್ಲದೇ ಸಾರಿಗೆಯ ಬಸ್ಸು ಕೂಡಾ ಸೋರಲು ಆರಂಭಿಸಿದೆ. ಜನರು ಸಾರಿಗೆ ಇಲಾಖೆಗೆ ಹಿಡಿಶಾಪ ಹಾಕುತ್ತಿದ್ದಾರೆ.

ಹುಬ್ಬಳ್ಳಿಯಿಂದ ಗುಡೇನಕಟ್ಟಿ ಮಾರ್ಗವಾಗಿ ಸಂಚರಿಸುವ ಸಾರಿಗೆ ಬಸ್ಸು ಮಳೆಯಿಂದ ಸೋರುತ್ತಿದ್ದು, ಮೊದಲೇ ಅರ್ಧದಷ್ಟು ಹಾಳಾದ ಬಸ್ಸು ಇದೀಗ ಮಳೆಯಿಂದಾಗಿ ಎಲ್ಲೆಂದರಲ್ಲಿ ಸೋರುತ್ತಿದೆ‌. ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರ ಮೇಲೆ ಎಲ್ಲೆಂದರಲ್ಲಿ ತುತಾದ ಬಸ್ಸಿನ ಮೇಲ್ಛಾವಣಿಯಿಂದ ಮಳೆಯ ಹನಿಗಳು ಸೋರುತ್ತಿವೆ.  ಇದರಿಂದಾಗಿ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿದೆ.

ಅಲ್ಲದೇ ಈ ಹಿಂದೆಯೇ ಬಸ್ಸಿನ ಸ್ಥಿತಿಯ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಪ್ರಯಾಣಿಕರು ಮನವಿ ಮಾಡಿದ್ದಾರೆ. ಆದರೆ ಅದನ್ನು ಲೆಕ್ಕಿಸದೇ ಮತ್ತೆ ಹಳೆಯ ಬಸ್ಸುಗಳನ್ನು ಸಂಚರಿಸಲು ಬಿಡುತ್ತಾರೆ. ಇದೀಗ ಮಳೆಗಾಲ ಬೇರೆ. ಇಂತಹ ಸಂದರ್ಭಗಳಲ್ಲಿ ಈ ಬಸ್ಸಿನಲ್ಲಿ  ಪ್ರಯಾಣಿಸುವುದೇ ದುಸ್ಥರವಾಗಿ ಬಿಟ್ಟಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ