ಈ ಗ್ರಾಮದ ಜನ ಮಳೆಗಾಲದಲ್ಲಿ ಮನೆ ತುಂಬಾ ಬೆಂಕಿ ಹರಡಿ ಮಲಗುತ್ತಾರಂತೆ. ಕಾರಣವೇನು ಗೊತ್ತಾ?
ಶುಕ್ರವಾರ, 13 ಸೆಪ್ಟಂಬರ್ 2019 (11:36 IST)
ಚಿಕ್ಕಮಗಳೂರು : ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಉಗ್ಗೇಹಳ್ಳಿ ಗ್ರಾಮದ ನಿವಾಸಿಗಳು ಮಳೆಗಾಲದಲ್ಲಿ ಮನೆ ತುಂಬಾ ಬೆಂಕಿ ಹರಡಿ ಮಲಗುತ್ತಿದ್ದಾರಂತೆ.
ಹೌದು. ಉಗ್ಗೇಹಳ್ಳಿಯ ಹೇಮಾವತಿ ನದಿ ತಟದಲ್ಲಿ 150ಕ್ಕೂ ಹೆಚ್ಚು ದಲಿತ ಕುಟುಂಬಗಳಿವೆ. ಮಳೆಗಾಲದಲ್ಲಿ ಮನೆಯ ಗೋಡೆ ಹಾಗೂ ನೆಲದ ತಂಪನ್ನು ಗ್ರಾಮಸ್ಥರಿಗೆ ತಡೆದುಕೊಳ್ಳಲು ಆಗದ ಕಾರಣ ಮಳೆಗಾಲದಲ್ಲಿ ಮನೆ ತುಂಬಾ ಬೆಂಕಿಯನ್ನು ಹರಡುತ್ತಾರಂತೆ.
ಗ್ರಾಮವನ್ನು ಸ್ಥಳಾಂತರಿಸಿ ಎಂದು ಮಾಡಿದ ಎಷ್ಟೇ ಮನವಿ ಪತ್ರಗಳನ್ನು ಬರೆದಿದ್ದರೂ ಇದುವರೆಗೂ ಯಾವುದೇ ಪ್ರತಿಕ್ರಿಯೆ ಕೂಡ ಬಂದಿಲ್ಲ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದ್ದಾರೆ. ಮಳೆ ಹೆಚ್ಚಾಗಿ ಸುರಿದರೆ ಈ ಗ್ರಾಮವೇ ಜಲಾವೃತಗೊಳ್ಳುತ್ತದೆಯಂತೆ.