ಮೇ 4 ರಿಂದ ಬಸ್ ಸಂಚಾರ ಆರಂಭ

ಶನಿವಾರ, 2 ಮೇ 2020 (15:48 IST)
ಎರಡನೇ ಹಂತದ ಲಾಕ್ ಡೌನ್ ಕೊನೆಗೊಳ್ಳುತ್ತಿದ್ದಂತೆ ಮೇ 4 ರಿಂದ ಬಸ್ ಸಂಚಾರ ಆರಂಭಗೊಳ್ಳುತ್ತದೆ ಎಂದು ಸಾರಿಗೆ ಸಚಿವ ಹೇಳಿದ್ದಾರೆ.

ಕೋವಿಡ್ – 19 ಹೆಚ್ಚಾಗಿರುವ ತಾಲೂಕುಗಳಲ್ಲಿ, ರೆಡ್ ಝೋನ್ ತಾಲೂಕುಗಳಲ್ಲಿ ಬಸ್ ಸಂಚಾರಕ್ಕೆ ನಿಷೇಧ ಹೇರಲಾಗಿದೆ.

ರೆಡ್ ಝೋನ್ ಹೊರತು ಪಡಿಸಿದಂತೆ ಆರೆಂಜ್ ಹಾಗೂ ಗ್ರೀನ್ ಝೋನ್ ಗಳಲ್ಲಿ ಸರಕಾರಿ ಬಸ್ ಗಳ ಓಡಾಟ ಇರುತ್ತದೆ ಎಂದು ಸಚಿವ ಲಕ್ಷ್ಮಣ ಸವದಿ ಹೇಳಿದ್ದಾರೆ.

ಮೇ 4 ರಿಂದಲೇ ಕೊರೊನಾ ವೈರಸ್ ಇಲ್ಲದ ತಾಲೂಕುಗಳ ಗ್ರಾಮೀಣ ಪ್ರದೇಶಗಳಿಗೂ ಬಸ್ ಗಳು ಸಂಚರಿಸುತ್ತವೆ ಎಂದಿದ್ದಾರೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ