ಡಾ.ಪುಟ್ಟರಾಜ ಕವಿ ಗವಾಯಿಗಳ ಹೆಸರು ಬಸ್ ನಿಲ್ದಾಣಕ್ಕೆ ; ಸರಕಾರ ಹೇಳಿದ್ದೇನು?
ಬಸ್ ನಿಲ್ದಾಣಕ್ಕೆ ಲಿಂ.ಡಾ.ಪುಟ್ಟರಾಜ ಕವಿ ಗವಾಯಿಗಳ ಹೆಸರು ಇಡಬೇಕೆಂದು ಜನರು ಒತ್ತಾಯಿಸುತ್ತಿದ್ದು, ಅದಕ್ಕೆ ಸರಕಾರ ಹೀಗೆ ಹೇಳ್ತಿದೆ.
ಗದಗ ನಗರದ ಹಳೆ ಬಸ್ ನಿಲ್ದಾಣದ ಬಳಿ ವಿವಿಧ ಸ೦ಘ-ಸ೦ಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಗದಗ ನಗರದ ಹಳೆ ಬಸ್ ನಿಲ್ದಾಣಕ್ಕೆ ಲಿ೦. ಡಾ ಪುಟ್ಟರಾಜ ಕವಿ ಗವಾಯಿಗಳವರ ಹೆಸರನ್ನು ಇಡಬೇಕೆ೦ದು ಒತ್ತಾಯಿಸಿ ಧರಣಿ ಸತ್ಯಾಗ್ರಹ ನಡೆಸಿದರು. ಇದಕ್ಕೆ ಪೂರಕವಾಗಿ ಸಚಿವ ಲಕ್ಷ್ಮಣ ಸವದಿ ಪತ್ರ ಬರೆದು ಸೂಚನೆ ನೀಡಿರೋದು ಗವಾಯಿಗಳ ಭಕ್ತರಲ್ಲಿ ಹರ್ಷಕ್ಕೆ ಕಾರಣವಾಗಿದೆ.