ನಗರದ ಬಳೆಪೇಟೆಯಲ್ಲಿ ರಾಸಾಯನಿಕ ವಸ್ತುಗಳ ಅಂಗಡಿಯನ್ನಿಟ್ಟುಕೊಂಡಿರುವ ಸಂಪತ್ ಕುಟುಂಬ ಕಳೆದ 40 ವರ್ಷಗಳಿಂದ ಬೆಂಗಳೂರಿನಲ್ಲಿ ವಾಸವಾಗಿದೆ. ಸೋಮವಾರ ಮುಂಜಾನೆ ಸಂಪತ್ ಕೆಲಸಕ್ಕೆ ಹೋದಾಗ ತಾಯಿ, ಪತ್ನಿ ಇಬ್ಬರೇ ಮನೆಯಲ್ಲಿದ್ದರು. 13 ವರ್ಷದ ಮಗಳು ಕೂಡ ಶಾಲೆಗೆ ಹೋಗಿದ್ದಳು. ಈ ಸಮಯದಲ್ಲಿ ಮನೆಗೆ ಬಂದ ಅಪರಿಚಿತ ದುಷ್ಕರ್ಮಿಗಳು ಅತ್ತೆ- ಸೊಸೆಯನ್ನು ಬರ್ಬರವಾಗಿ ಕೊಲೆಗೈದಿದ್ದಾರೆ. ಆದರೆ ಮನೆಯಲ್ಲಿರುವ ಯಾವ ಮೌಲ್ಯಯುತ ವಸ್ತುವೂ ಕಳ್ಳತನವಾಗಿಲ್ಲ.