ಉದ್ಯಮಿ ಸಂತೋಷ ದುಂಡಪ್ಪ ಪದ್ಮಣ್ಣ ಸಾವು ಪ್ರಕರಣ: ತಾಯಿ ವಿರುದ್ಧದವೇ ದೂರು ನೀಡಿದ ಪುತ್ರಿ

Sampriya

ಬುಧವಾರ, 16 ಅಕ್ಟೋಬರ್ 2024 (21:01 IST)
ಬೆಳಗಾವಿ: ಅಕ್ಟೋಬರ್ 9ರಂದು ಇಲ್ಲಿನ ರಿಯಲ್‌ ಎಸ್ಟೇಟ್‌ ಉದ್ಯಮಿ ಸಂತೋಷ ದುಂಡಪ್ಪ ಪದ್ಮಣ್ಣವರ (47) ಅವರ ಸಾವಿನ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ. ಈ ಸಾವಿನ ಸಂಬಂಧ ಪುತ್ರಿಯೇ ತನ್ನ ತಾಯಿ ಹಾಗೂ ನಾಲ್ವರ ವಿರುದ್ಧ ದೂರು ನೀಡಿದ್ದಾಳೆ.

ಇದೀಗ ಪೊಲೀಸರು ಇದು ಸಂಚು ರೂಪಿಸಿ ಮಾಡಿದ ಕೊಲೆ ಎಂದು ಪೊಲೀಸರು ಸಂದೇಹಪಟ್ಟಿದ್ದಾರೆ. ಇದೀಗ ಹೂತಿದ್ದ ಸಂತೋಷ್ ಅವರ ಶವವನ್ನು ಹೊರತೆಗೆದು ಪೊಲೀಸರು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ.

ಪುತ್ರಿ ಸಂಜನಾ ನೀಡಿದ ದೂರಿನಂತೆ ತಾಯಿ ಉಮಾ (41), ಇವರ ಫೇಸ್‌ಬುಕ್‌ ಸ್ನೇಹಿತ, ಮಂಗಳೂರು ಮೂಲದ ಶೋಬಿತ್‌ ಗೌಡ (30), ಮನೆಗೆಲಸದವರಾದ ನಂದಾ ಕುರಿಯಾ, ಪ್ರಕಾಶ ಕುರಿಯಾ ಹಾಗೂ ಇನ್ನೊಬ್ಬ ಅಪರಿಚಿತ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಎಫ್‌ಐಆರ್‌ ದಾಖಲಿಸಲಾಗಿದೆ.

ಅಕ್ಟೋಬರ್ 9ರಂದು ರಾತ್ರಿ ಸಂತೋಷ್ ಅವರು ಹೃದಯಾಘಾತದಿಂದ ಸಾವನ್ನಪ್ಪಿದರು ಎಂದು ಪತ್ನಿ ಕುಟುಂಬದವರಿಗೆ ತಿಳಿಸಿದ್ದರು. ಇದನ್ನು ನಂಬಿದ ಕುಟುಂಬದವರು ಅ.10ರಂದು ಅಂತ್ಯಕ್ರಿಯೆ ಮುಗಿಸಿದ್ದರು. ವಿಷಯ ತಿಳಿದು ಪುತ್ರಿ ಸಂಜನಾ ಬೆಳಗಾವಿಗೆ ಬಂದಿದ್ದಳು. ತಂದೆಯ ಕೊನೆಯ ಕ್ಷಣಗಳನ್ನು ನೋಡಬೇಕೆಂದು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ತಾಯಿ ಉಮಾ ತನ್ನ ತಂದೆಯನ್ನು ಸ್ನಾನ ಮಾಡಿಕೊಂಡು ಬಾ ನಂತರ ತೋರಿಸುತ್ತೇನೆ ಎಂದು ಹೇಳಿರುವುದು ಆಕೆಗೆ ಗೊತ್ತಾಗಿದೆ.

ಇನ್ನೂ ಮಗಳು ಸಿಸಿಟಿವಿ ಪರಿಶೀಲನೆ ಮಾಡುತ್ತಿರುವುದನ್ನು ನೋಡಿ ಉಮಾ ತನ್ನ ಇಬ್ಬರು ಪುತ್ರರನ್ನು ಕರೆದು ಕೊಲೆ ನಡೆದ ಸಮಯದ ಸಿಸಿಟಿವಿ ದೃಶ್ಯಾವಳಿಗಳನ್ನು  ಡಿಲಿಟ್‌ ಮಾಡಿಸಿದ್ದರು. ಈ ವಿಷಯವನ್ನು ಇಬ್ಬರೂ ಬಾಲಕರು ತಮ್ಮ ಅಕ್ಕ ಸಂಜನಾಗೆ ತಿಳಿಸಿದರು. ಆ ಕ್ಷಣದಿಂದಲೇ ಸಂಜನಾಗೆ ಅನುಮಾನ ಶುರುವಾಯಿತು. ಅ.15ರಂದು ಸಂಜನಾ ಪೊಲೀಸ್ ಠಾಣೆಯಲ್ಲಿ ತನ್ನ ತಂದೆ ಆರೋಗ್ಯವಾಗಿದ್ದರು. ಅವರದು ಸಹಜ ಸಾವಲ್ಲ, ಕೊಲೆ ಎಂದು ಅನುಮಾನಿಸಿ ದೂರು ನೀಡಿದ್ದಳು.

ಪೊಲೀಸ್ ಮಾಹಿತಿ ಪ್ರಕಾರ: ಉಮಾ ತನ್ನ ಫೇಸ್‌ಬುಕ್‌ ಸ್ನೇಹಿತ ಶೋಬಿತ್‌ ಗೌಡ ಜತೆ ಸಲುಗೆ ಬೆಳೆಸಿಕೊಂಡಿದ್ದರು. ಈ ಸಂದೇಹದಿಂದ ಸಂತೋಷ ಜಗಳ ಶುರು ಮಾಡಿದ್ದರು. ಅವರ ಉಪಟಳ ತಾಳದೇ ಉಮಾ ಕೊಲೆ ಸಂಚು ರೂಪಿಸಿದ್ದರು. ಅ.9ರಂದು ಕುಡಿಯುವ ನೀರಿನಲ್ಲಿ ನಿದ್ರೆ ಮಾತ್ರ ಹಾಕಿದ್ದರು. ಸಂತೋಷ ನಿದ್ರೆಗೆ ಜಾರಿದ ಮೇಲೆ ತಲೆದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿದ ಅನುಮಾನ ಇದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ