ಉಪಚುನಾವಣೆ ಫಲಿತಾಂಶ ಬಂದ ಮೇಲೆ ಬಿವೈ ವಿಜಯೇಂದ್ರಗೆ ಕೊಕ್

Krishnaveni K

ಮಂಗಳವಾರ, 12 ನವೆಂಬರ್ 2024 (08:47 IST)
ಬೆಂಗಳೂರು: ಕರ್ನಾಟಕ ಮೂರು ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆ ಕೇವಲ ಆಡಳಿತಾರೂಢ ಕಾಂಗ್ರೆಸ್ ಮಾತ್ರವಲ್ಲ, ಪ್ರತಿಪಕ್ಷ ಬಿಜೆಪಿ ನಾಯಕರಿಗೂ ನಿರ್ಣಾಯಕ. ಈ ಉಪಚುನಾವಣೆಯಲ್ಲಿ ಬಿಜೆಪಿ ಸೋತರೆ ಬಿವೈ ವಿಜಯೇಂದ್ರ ಸ್ಥಾನಕ್ಕೆ ಕುತ್ತು ಬರಬಹುದು.

ಈಗಾಗಲೇ ರಾಜ್ಯ ಬಿಜೆಪಿ ಎರಡು ಬಣವಾಗಿದೆ. ಒಂದು ವಿಜಯೇಂದ್ರ ಬಣವಾದರೆ ಇನ್ನೊಂದು ಬಸನಗೌಡ ಪಾಟೀಲ್, ರಮೇಶ್ ಜಾರಕಿಹೊಳಿ ಬಣ. ರಮೇಶ್ ಜಾರಕಿಹೊಳಿ, ಯತ್ನಾಳ್ ಈಗಾಗಲೇ ವಿಜಯೇಂದ್ರ ನಾಯಕತ್ವದ ಬಗ್ಗೆ ಕೆಂಡ ಕಾರುತ್ತಲೇ ಇದ್ದಾರೆ. ಕಾಂಗ್ರೆಸ್ ಜೊತೆ ಹೊಂದಾಣಿಕೆ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಜೊತೆಗೆ ಬಹಿರಂಗವಾಗಿಯೇ ಬಿವೈ ವಿಜಯೇಂದ್ರ, ಯಡಿಯೂರಪ್ಪ ವಿರುದ್ಧ ಸಾವಿರಾರು ಕೋಟಿ ರೂ. ಹಗರಣದ ಆರೋಪ ಮಾಡಿದ್ದಾರೆ. ಹೀಗಾಗಿ ಉಪಚುನಾವಣೆಯಲ್ಲಿ ಬಿಜೆಪಿ ಸೋತರೆ ರಾಜ್ಯಾಧ್ಯಕ್ಷ ಪಟ್ಟದಿಂದ ವಿಜಯೇಂದ್ರ ಕೊಕ್ ನೀಡುವ ಕೂಗು ಮತ್ತಷ್ಟು ಬಲವಾಗಲಿದೆ.

ಈಗಾಗಲೇ ರಮೇಶ್ ಜಾರಕಿಹೊಳಿ ಉಪಚುನಾವಣೆ ಬಳಿಕ ರಾಜ್ಯ ಬಿಜೆಪಿ ನಾಯಕತ್ವ ಬದಲಾವಣೆ ಬಗ್ಗೆ ಸುಳಿವು ನೀಡಿದ್ದಾರೆ. ಹೀಗಾಗಿ ಬಿಜೆಪಿ ಸೋತರೆ ಈ ನಾಯಕರು ವಿಜಯೇಂದ್ರ ಬದಲಾವಣೆಗೆ ಹೈಕಮಾಂಡ್ ಮಟ್ಟದಲ್ಲಿ ಒತ್ತಾಯ ಮಾಡುವುದಂತೂ ನಿಜ. ಹೀಗಾಗಿ ಈ ಉಪಚುನಾವಣೆ ವಿಜಯೇಂದ್ರ ಪಾಲಿಗೆ ನಿರ್ಣಾಯಕವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ