ಬೆಂಗಳೂರು: ರಾಜ್ಯ ಬಿಜೆಪಿ ಈಗ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಒಂದೆಡೆ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಟೀಂ, ಇನ್ನೊಂದೆಡೆ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಟೀಂ. ಇಬ್ಬರು ನಾಯಕರ ಜಗಳದಲ್ಲಿ ಕಾರ್ಯಕರ್ತರು ಫುಲ್ ಕನ್ ಫ್ಯೂಸ್ ಆಗಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ ಈ ಮೊದಲೇ ತಮ್ಮದೇ ತಂಡ ಕಟ್ಟಿಕೊಂಡು ವಕ್ಫ್ ವಿರುದ್ಧ ರಾಜ್ಯದ ಹಲವೆಡೆ ಸಂಚರಿಸಿ ಹೋರಾಟ ನಡೆಸಿದರು. ಇದೀಗ ಬಿವೈ ವಿಜಯೇಂದ್ರ ನೇತೃತ್ವದ ಟೀಂ ವಕ್ಫ್ ವಿರುದ್ಧ ಹೋರಾಟಕ್ಕೆ ಮುಂದಾಗಿದೆ. ಇಂದು ಕಲಬುರಗಿ, ಬೀದರ್ ಜಿಲ್ಲೆಗಳಲ್ಲಿ ವಿಜಯೇಂದ್ರ ನೇತೃತ್ವದ ಬಿಜೆಪಿ ಟೀಂ ಜನಾಂದೋಲನ ಹೋರಾಟ ಹಮ್ಮಿಕೊಂಡಿದೆ.