ಬೈ ಎಲೆಕ್ಷನ್ : ಜಾಧವ ಪುತ್ರನ ಸೋಲಿಗೆ ಕೈ ಪಡೆ ಖೆಡ್ಡಾ ರೆಡಿ!
ಬುಧವಾರ, 1 ಮೇ 2019 (17:40 IST)
ಉಪಚುನಾವಣೆಗಳಲ್ಲಿ ಗೆಲ್ಲೋಕೆ ಕಾಂಗ್ರೆಸ್ ಪಡೆ ನಿತ್ಯ ತಂತ್ರದ ಮೇಲೆ ಪ್ರತಿ ರಣತಂತ್ರ ರೂಪಿಸುವಲ್ಲಿ ಬ್ಯುಸಿಯಾಗಿದೆ. ಜಾಧವ್ ಪುತ್ರನಿಗೆ ಸೋಲಿನ ಖೆಡ್ಡಾ ತೋಡಲೇಬೇಕು ಎಂದು ಕೈ ಪಡೆ ನಿರ್ಧಾರ ಮಾಡಿದೆ.
ಕಲಬುರಗಿ ಜಿಲ್ಲೆಯ ಚಿಂಚೋಳಿ ಕ್ಷೇತ್ರದ ಉಪಚುನಾವಣೆ ಗೆಲ್ಲೋಕೆ ಕೈ ರಣತಂತ್ರಗಳಿಗೆ ಮೊರೆ ಹೋಗಿದೆ. ಉಮೇಶ್ ಜಾಧವ್ ಪುತ್ರನನ್ನ ಸೋಲಿಸೋಕೆ ಮಾಸ್ಟರ್ ಪ್ಲಾನ್ ರೂಪಿಸಿದೆ. 56 ಜನ ಸಂಸದರು ಮತ್ತು ಶಾಸಕರಿಗೆ ಹೊಸದಾಗಿ ಜವಾಬ್ದಾರಿ ವಹಿಸಲಾಗಿದೆ.
ಪ್ರತಿ ಗ್ರಾಮಕ್ಕೊಬ್ಬರಂತೆ ಶಾಸಕರಿಗೆ ಉಸ್ತುವಾರಿ ನೀಡಲಾಗಿದೆ. ಚಿಂಚೋಳಿಯ ಎಲ್ಲಾ ಗ್ರಾಮಗಳಿಗೂ ಶಾಸಕರಿಗೆ ಹೊಣೆ ನೀಡಲಾಗಿದೆ.
ಸಂಸದರು, ಶಾಸಕರ ಜೊತೆ ಪದಾಧಿಕಾರಿಗಳೂ ಹೊಣೆ ವಹಿಸಲಾಗಿದೆ. ಇದೇ ಮೊದಲ ಬಾರಿಗೆ 56 ಗಣ್ಯರಿಗೆ ಜವಾಬ್ದಾರಿ ನೀಡಿದೆ ಕೈ ಪಡೆ. ಈಗಾಗಲೇ ಕೆಲ ಸಚಿವರು, ಶಾಸಕರಿಗೆ ಜವಾಬ್ದಾರಿ ವಹಿಸಲಾಗಿತ್ತು. ಆದರೆ ಗೆಲ್ಲಲ್ಲೇಬೇಕೆಂಬ ಹಿನ್ನೆಲೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.
ಬಿಜೆಪಿಯ ಎಲ್ಲ ತಂತ್ರಗಳನ್ನೂ ಬಗ್ಗುಬಡಿಯಲಿದೆ ಈ ತಂತ್ರಗಾರಿಕೆ ಎಂಬ ನಂಬಿಕೆ ಕಾಂಗ್ರೆಸ್ ವಲಯದಲ್ಲಿದೆ. ಗೌಪ್ಯವಾಗಿಯೇ ಇಷ್ಟೊಂದು ಶಾಸಕರಿಗೆ ಜವಾಬ್ದಾರಿ ಹಂಚಿದ ಕಾಂಗ್ರೆಸ್, ಕುಂದಗೋಳಕ್ಕಿಂತ ಚಿಂಚೋಳಿಗೆ ಹೆಚ್ಚು ಮಹತ್ವ ಕೊಟ್ಟಿದೆ.