ಮಧ್ಯಪ್ರದೇಶದ ವಿವಿಧೆಡೆ ಮಂಗಳವಾರ ರ್ಯಾಲಿ ಉದ್ದೇಶಿಸಿ ಮಾತನಾಡಿದ ಅವರು, 'ದೆಹಲಿಯ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಪ್ರಧಾನಿ ನಿವಾಸದ ಎದುರು ಹೋಗಿ ನೀವು ಸುಮ್ಮನೇ ಚೌಕಿದಾರ್ ಎಂದರೂ ಸಾಕು ಅಲ್ಲಿನ ಭದ್ರತಾ ಸಿಬ್ಬಂದಿ 'ಚೋರ್ ಹೈ' ಎಂದು ಪೂರ್ಣಗೊಳಿಸುತ್ತಾರೆ,' ಎಂದು ಹೇಳಿದ್ದಾರೆ.
ಲೋಕಸಭೆಗೆ ನಾಲ್ಕು ಹಂತದ ಚುನಾವಣೆ ನಡೆದ ಬಳಿಕ ಪ್ರಧಾನಿ ನರೇಂದ್ರ ಮೋದಿಗೆ ಸೋಲು ಖಚಿತ ಎನ್ನುವುದು ಮನವರಿಕೆಯಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ಶತಃಸಿದ್ಧ. ಆ ನಂತರ ದೇಶದ ಯಾವ ರೈತನೂ ಸಾಲ ಕಟ್ಟಿಲ್ಲ ಎಂಬ ಕಾರಣದಿಂದ ಜೈಲುಪಾಲಾಗುವ ಸನ್ನಿವೇಶ ಇರುವುದಿಲ್ಲ, ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.