ಕರುವಿನ ಹೊಟ್ಟೆ, ರುಂಡ ಕತ್ತರಿಸಿದ ಚಿರತೆ
ಚಿರತೆಯೊಂದು ಕರುವಿನ ತಲೆ ಕತ್ತರಿಸಿ ತಿಂದು ಹೋಗಿರೋದು ಅಲ್ಲಿನ ಜನರು ಬೆಚ್ಚಿ ಬೀಳುವಂತೆ ಮಾಡಿದೆ.
ಮಂಡ್ಯ ಸಂತೇಬಾಚಹಳ್ಳಿ ಹೋಬಳಿಯ ಮಾವಿನಕಟ್ಟೆ ಕೊಪ್ಪಲು ಗ್ರಾಮದ ಪುಟ್ಟನರಸಮ್ಮ ಎಂಬುವರಿಗೆ ಸೇರಿದ ಎಮ್ಮೆ ಕರು ಮೇಲೆ ರಾತ್ರಿ ಚಿರತೆ ದಾಳಿ ಮಾಡಿದೆ. ಕರುವಿನ ಹೊಟ್ಟೆಯ ಭಾಗ ಮತ್ತು ಕುತ್ತಿಗೆ ಭಾಗವನ್ನು ತಿಂದು ಹೋಗಿದೆ.
ಬೆಳಿಗ್ಗೆ ಎಂದಿನಂತೆ ತಮ್ಮ ಕೊಟ್ಟಿಗೆಯಲ್ಲಿ ಹೋಗಿ ನೋಡಿದಾಗ ಎಮ್ಮೆಯ ಕರು ಸತ್ತು ಬಿದ್ದಿರುವುದನ್ನು ಕಂಡು ಅರಣ್ಯ ಅಧಿಕಾರಿಗಳಿಗೆ ಮನೆ ಮಂದಿ ದೂರು ನೀಡಿದ್ದಾರೆ.
ಅಧಿಕಾರಿಗಳು ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬೋನನ್ನು ಇರಿಸಿ ಚಿರತೆಯನ್ನು ಸೆರೆ ಹಿಡಿಯುವ ಭರವಸೆಯನ್ನು ಗ್ರಾಮಸ್ಥರಿಗೆ ನೀಡಿದ್ದಾರೆ.
ಮಾವಿನಕಟ್ಟೆ ಕೊಪ್ಪಲು ಗ್ರಾಮದಲ್ಲಿ ಚಿರತೆ ನಡೆಸುತ್ತಿರೋದು ಮೂರನೇ ದಾಳಿಯಾಗಿದೆ.