ಭಾರತ್‌ ಬಂದ್‌ಗೆ ಕರೆ: ನಾಳೆ ಏನೆಲ್ಲಾ ಇರುತ್ತೆ, ಏನೆಲ್ಲಾ ಇರಲ್ಲ

Sampriya

ಮಂಗಳವಾರ, 20 ಆಗಸ್ಟ್ 2024 (16:05 IST)
Photo Courtesy X
ದೆಹಲಿ: ಪರಿಶಿಷ್ಟ ಜಾತಿಗಳು (ಎಸ್‌ಸಿಗಳು) ಮತ್ತು ಪರಿಶಿಷ್ಟ ಪಂಗಡಗಳು (ಎಸ್‌ಟಿಗಳು) ಒಳಗೆ ಉಪ-ವರ್ಗಗಳನ್ನು ರಚಿಸಲು ರಾಜ್ಯಗಳಿಗೆ ಅನುಮತಿ ನೀಡಿದ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪನ್ನು ವಿರೋಧಿಸಿ ನಾಳೆ ಭಾರತ್‌ ಬಂದ್‌ ಮೀಸಲಾತಿ ಬಚಾವೋ ಸಂಘರ್ಷ ಸಮಿತಿ ಕರೆ ನೀಡಿದೆ.

ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಪ್ರತಿಭಟಿಸಲು ಮತ್ತು ನ್ಯಾಯಾಲಯದ ಆದೇಶವನ್ನು ಹಿಂಪಡೆಯುವಂತೆ ಒತ್ತಾಯಿಸಿ ಮೀಸಲಾತಿ ಬಚಾವೋ ಸಂಘರ್ಷ ಸಮಿತಿಯು ಆಗಸ್ಟ್ 21 ರಂದು ರಾಷ್ಟ್ರವ್ಯಾಪಿ ಬಂದ್‌ಗೆ ಕರೆ ನೀಡಿದೆ.

ಇನ್ನೂ ಭಾರತ್‌ ಬಂದ್‌ಗೆ ಕರೆ ಕೊಟ್ಟಿರುವುದರಿಂದ ಉತ್ತರ ಭಾರತದಲ್ಲಿ ಅಲರ್ಟ್‌ ಆಗಿ ಇರುವಂತೆ  ಹಿರಿಯ ನಾಗರಿಕ ಮತ್ತು ಪೊಲೀಸ್ ಅಧಿಕಾರಿಗಳು ಸಭೆ ನಡೆಸಿದ್ದಾರೆ. ಎಲ್ಲ ವಿಭಾಗೀಯ ಆಯುಕ್ತರು, ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಪಾಲ್ಗೊಂಡಿದ್ದು, ಬಂದ್‌ಗೆ ಸಿದ್ಧತೆ ಮಾಡಿಕೊಳ್ಳುವಂತೆ ಸೂಚಿಸಲಾಗಿದೆ.

ಇನ್ನೂ ನಾಳೆ ಬಂದ್‌ ಹಿನ್ನೆಲೆ ಈ ಕೆಲಗಿನ ಸೇವೆಗಳಲ್ಲಿ ಯಾವುದೇ ವ್ಯತ್ಯಯವಿರುವುದಿಲ್ಲ.

    ತುರ್ತು, ಆಂಬ್ಯುಲೆನ್ಸ್ ಸೇವೆಗಳು, ಆಸ್ಪತ್ರೆಗಳು ಮತ್ತು ವೈದ್ಯಕೀಯ ಸೇವೆಗಳು

    ಪೊಲೀಸ್ ಸೇವೆಗಳು ಸಕ್ರಿಯವಾಗಿರಲಿವೆ.

    ಮೆಡಿಕಲ್‌ಗಳು

  ಸರ್ಕಾರಿ ಕಚೇರಿಗಳು, ಬ್ಯಾಂಕ್‌ಗಳು, ಶಾಲಾ-ಕಾಲೇಜುಗಳು ಎಂದಿನಂತೆ ತೆರೆಯಲಿದೆ.


ಇನ್ನೂ ಉಳಿದವು ಪ್ರತಿಭಟನೆ ಬಿಸಿ ಮೇಲೆ ಬಂದ್‌ ಆಗಲಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ