ಪಿಎಸ್ಐ ಪರೀಕ್ಷೆ ರದ್ದು: ಪ್ರತಿಭಟನೆ
ಅವರು ಪಿಎಸ್ ಐ ಹುದ್ದೆಗೆ ಪರೀಕ್ಷೆ ಬರೆಯೋಕೆ ಬಂದಿದ್ದರು. ಆದರೆ ಪರೀಕ್ಷೆ ನಡೆಯದ ಕಾರಣ ಅಭ್ಯರ್ಥಿಗಳು ಪ್ರತಿಭಟನೆಯ ದಾರಿ ತುಳಿದ ಘಟನೆ ನಡೆದಿದೆ.
ತಾಂತ್ರಿಕ ದೋಷ ಹಿನ್ನೆಲೆ ರೈಲ್ವೆ PSI ಎಕ್ಸಾಮ್ ರದ್ದುಗೊಂಡ ಪರಿಣಾಮ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
300 ಜನ ಅಭ್ಯರ್ಥಿಗಳ ಮೂರು ಬ್ಯಾಚ್ ಪರೀಕ್ಷೆ ರದ್ದುಗೊಂಡಿದೆ. ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲ್ಲೂಕಿನ ಎಸ್ ಟಿ ಜೆ ಐ ಟಿ ಕಾಲೇಜು ಸೆಂಟರ್ ನಲ್ಲಿ ಪರೀಕ್ಷೆ ರದ್ದುಗೊಂಡ ಘಟನೆ ನಡೆದಿದೆ.
ಖಾಸಗಿ ಶಿಕ್ಷಣ ಸಂಸ್ಥೆ ಪರೀಕ್ಷೆ ಜವಾಬ್ದಾರಿ ವಹಿಸಿಕೊಂಡಿತ್ತು. ಇಂದು ಬೆಳಗ್ಗೆಯಿಂದ ತಾಂತ್ರಿಕ ದೋಷದಿಂದ ಪರೀಕ್ಷೆ ರದ್ದಾಗಿದೆ. ದೂರದ ಊರುಗಳಿಂದ ಪರೀಕ್ಷೆಗೆ ಹಾಜರಾಗಿದ್ದ ಅಭ್ಯರ್ಥಿಗಳು ಆಕ್ರೋಶಗೊಂಡು, ಪರೀಕ್ಷೆ ರದ್ದಾಗಿದ್ದಕ್ಕೆ ಪ್ರತಿಭಟನೆ ನಡೆಸಿದರು.