ಅಯ್ಯಪ್ಪಸ್ವಾಮಿ ಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ
 
ಶಬರಿಮಲೈ ಅಯ್ಯಪ್ಪ ದೇಗುಲಕ್ಕೆ ಮಹಿಳೆಯರ ಪ್ರವೇಶ ವಿಚಾರಕ್ಕೆ ಸಂಬಂಧಿಸಿದಂತೆ ಶಬರಿಮಲೈ ಅಯ್ಯಪ್ಪಸ್ವಾಮಿ ಕ್ಷೇತ್ರ ಸಂರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ ನಡೆದಿದೆ.
									
				ದಾವಣಗೆರೆ ನಗರದ ಜಯದೇವ ವೃತ್ತದಿಂದ ಎಸಿ ಕಛೇರಿಯವರೆಗೆ ಅಯ್ಯಪ್ಪ ಭಕ್ತರಿಂದ ಪ್ರತಿಭಟನಾ ಮೆರವಣಿಗೆ ನಡೆಯಿತು.
ಕೇರಳ ಸರಕಾರದ ವಿರುದ್ಧ ಘೋಷಣೆ ಕೂಗಿದ ಅಯ್ಯಪ್ಪ ಭಕ್ತರು, 800 ವರ್ಷದ ಸಾಂಪ್ರದಾಯ ಮುರಿದ ಕೇರಳ ಸರಕಾದ ವಿರುದ್ಧ ಭಕ್ತರ ಅಕ್ರೋಶ ವ್ಯಕ್ತಪಡಿಸಿದರು.
									
				ಮುಖ್ಯಮಂತ್ರಿ ಎಂದು ಹೇಳಲಿಕ್ಕೆ ಪಿಣರಾಯಿ ನಾಲಾಯಕ್ ಎಂದು ಕಿಡಿಕಾರಿರುವ ಅಯ್ಯಪ್ಪ ಭಕ್ತರು, ಸಾಂಪ್ರದಾಯ ಮುರಿಬಾರದು.  ಅದು ಯಥಾಸ್ಥಿತಿಯಲ್ಲಿರಬೇಕು ಎಂದು ಧಾರ್ಮಿಕ ಗುರುಗಳು ಹೇಳಿದ್ದಾರೆ. ಸುಪ್ರೀಂ ಕೋರ್ಟ್ ಆದೇಶ ಕೂಡ ಇದಕ್ಕೆ ಬರಲ್ಲ. 
									
				ಹೆಣ್ಣು ಮಕ್ಕಳು ರೀತಿಯಲ್ಲಿ ಹೋಗಿಲ್ಲ. ಮಾರುವೇಷದಲ್ಲಿ ಮಹಿಳೆಯರಿಬ್ಬರು ದೇಗುಲ ಪ್ರವೇಶ ಮಾಡಿದ್ದಾರೆ ಎಂದು ಕಿಡಿಕಾರಿದರು.