ಟ್ರಾನ್ಸ್ ಜೆಂಡರ್ ಬಿಲ್ ‌‌ ಹಿಂಪಡೆಯಲು ಮಂಗಳಮುಖಿಯರ ಆಗ್ರಹ

ಮಂಗಳವಾರ, 1 ಜನವರಿ 2019 (16:00 IST)
ಟ್ರಾನ್ಸ್ ಜೆಂಡರ್ ಬಿಲ್ ನ್ನು‌‌ ಹಿಂಪಡೆಯುವಂತೆ ಒತ್ತಾಯಿಸಿ ಮಂಗಳಮುಖಿಯರು ‌ಪ್ರತಿಭಟನೆ ನಡೆಸಿದ್ದಾರೆ.

ಹುಬ್ಬಳ್ಳಿ ನಗರದ ಅಂಬೇಡ್ಕರ್ ವೃತ್ತದಿಂದ ತಹಶೀಲ್ದಾರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಮಂಗಳಮುಖಿಯರು ಕೇಂದ್ರ  ಸರಕಾರದ ವಿರುದ್ಧ ಘೋಷಣೆ ಕೂಗಿ‌ ಆಕ್ರೋಶ ವ್ಯಕ್ತಪಡಿಸಿದರು.

ಲೋಕಸಭೆಯಲ್ಲಿ ಟ್ರಾನ್ಸ್ ಜೆಂಡರ್ ಬಿಲ್‌ ನ್ನು 27 ತಿದ್ದುಪಡಿ ಸಮೇತ ಅನುಮೋದನೆ ನೀಡಲಾಗಿದೆ. ಈ ಬಿಲ್ ಮಾನವ ಕಳ್ಳ ಸಾಗಾಣೆ ಸೇರಿದಂತೆ ಹಲವು ನಿಬಂಧನೆಗೆ ಒಳಪಟ್ಟಿದ್ದು, ಭಾರತದ ಸಂವಿಧಾನ ಸಿದ್ದಾಂತಕ್ಕೆ ವಿರುದ್ಧವಾಗಿದೆ. ಈಗಾಗಲೇ ಭಾರತೀಯ ದಂಡ ಸಂಹಿತೆ ಸೆಕ್ಷನ್ 379 ಹಾಗೂ 370 ಎ ಅಡಿಯಲ್ಲಿ ಮಾನವ ಕಳ್ಳಸಾಗಾಣೆ ಹಾಗೂ ಲೈಂಗಿಕ ದುರ್ಬಳಕೆ  ಮಾಡಿಕೊಳ್ಳುವದಕ್ಕೆ ಶಿಕ್ಷೆ ಇದ್ದು ಈ ಬಿಲ್ ಅನಾವಶ್ಯಕವಾಗಿದೆ. 

ಹೀಗಾಗಿ ಟ್ರಾನ್ಸ್ ಜೆಂಡರ್ ವ್ಯಕ್ತಿಗಳ ಬಿಲ್ 2018 ನ್ನು ಮತ್ತೊಮ್ಮೆ ಕೂಲಂಕುಶವಾಗಿ ಪರಿಶೀಲಿಸಿ ಸುಪ್ರೀಂಕೋರ್ಟ್ ತೀರ್ಪಿಗೆ ಪೂರಕವಾಗಿ ಹಾಗೂ ಸಂಸದೀಯ ಸ್ಥಾಯಿ ಸಮಿತಿಯ ಮುಂದೆ ಟ್ರಾನ್ಸ್ ಜೆಂಡರ್ ಸಮುದಾಯವು ನೀಡಿರುವ ಅಭಿಪ್ರಾಯ ಒಳಗೊಂಡಿರುವಂತೆ ಮತ್ತೊಮ್ಮೆ ಟ್ರಾನ್ಸ್ ಬಿಲ್ ನ್ನು ಮಂಡಿಸಬೇಕು ಎಂದು ಒತ್ತಾಯಿಸಿದರು.



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ