ವರ್ಕ್ ಫ್ರಮ್‌ ಹೋಮ್​​​ ರದ್ದು- ಮಸ್ಕ್‌

ಶುಕ್ರವಾರ, 11 ನವೆಂಬರ್ 2022 (17:50 IST)
3,500 ಉದ್ಯೋಗಿಗಳ ವಜಾ ಬಳಿಕ, ಟ್ವಿಟರ್‌ ಸಿಬ್ಬಂದಿಗೆ ಮೊದಲ ಇ-ಮೇಲ್‌ ಅನ್ನು ಆ ಕಂಪನಿಯ ಒಡೆಯ ಎಲಾನ್‌ ಮಸ್ಕ್‌ ಕಳಿಸಿದ್ದಾರೆ. ವರ್ಕ್ ಫ್ರಮ್‌ ಹೋಮ್‌ ಪದ್ಧತಿ ಇನ್ನು ಮುಂದೆ ಇರುವುದಿಲ್ಲ. ಉದ್ಯೋಗಿಯು ಕಚೇರಿಯಲ್ಲಿ ವಾರಕ್ಕೆ 40 ಗಂಟೆ ಇರಬೇಕು ಎನ್ನುವ ಸೂಚನೆಯನ್ನು ನೀಡಿದ್ದಾರೆ. ಭವಿಷ್ಯದ ದಿನಗಳಲ್ಲಿ ಕಷ್ಟದ ಸಂದರ್ಭಗಳು ಇರಲಿವೆ, ಎದುರಿಸಲು ಎಲ್ಲರೂ ಸಜ್ಜಾಗಿ ಎಂದು ತಡರಾತ್ರಿ ಉದ್ಯೋಗಿಗಳಿಗೆ ಕಳಿಸಿದ ಇ-ಮೇಲ್‌ನಲ್ಲಿ ಎಲಾನ್‌ ಮಸ್ಕ್‌ ಹೇಳಿದ್ದಾರೆ. ಟೆಸ್ಲಾ ಕಂಪನಿಯ ಮಾಲೀಕರಾದ ಮಸ್ಕ್‌, ಟ್ವಿಟರ್‌ ಅನ್ನು ಖರೀದಿಸಿದ ಮೇಲೆ ನಾನಾ ಬದಲಾವಣೆಗಳಾಗುತ್ತಿವೆ. ಸ್ವಾಧೀನದ ಬಳಿಕ ಈ ಎರಡು ವಾರಗಳಲ್ಲಿ ಉದ್ಯೋಗಿಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ. ಟ್ವಿಟರ್‌ ಡೀಲ್‌ ಮುಗಿದ ತಕ್ಷಣವೇ, CEO ಪರಾಗ್‌ ಅಗರ್‌ವಾಲ್‌ ಸೇರಿದಂತೆ ಉನ್ನತ ಅಧಿಕಾರಿಗಳನ್ನು ಮಸ್ಕ್‌ ವಜಾ ಮಾಡಿದ್ದರು. ಬಹುತೇಕ ಉದ್ಯೋಗಿಗಳು ಕಚೇರಿಗೆ ಪೂರ್ಣಾವಧಿ ಕೆಲಸಕ್ಕೆ ಬರಲು ಒಲವು ತೋರಿಸಿಲ್ಲ. ಶೇ.92 ಉದ್ಯೋಗಿಗಳು ಕಚೇರಿ ಮತ್ತು ಮನೆಯಲ್ಲಿ ಕೆಲಸ ಮಾಡಲು ಬಯಸಿದ್ದಾರೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ