ವಾಷಿಂಗ್ಟನ್ : ಟೆಸ್ಲಾ ಸಿಇಒ ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಕೊಳ್ಳುವ ಯೋಜನೆ ಬೆನ್ನಲ್ಲೇ ಟ್ವಿಟ್ಟರ್ ಮಾಜಿ ಸಿಇಒ ಜಾಕ್ ಡೋರ್ಸೆ ಮಂಡಳಿಯಿಂದ ಹೊರನಡೆದಿದ್ದಾರೆ.
ಜಾಕ್ ಡೋರ್ಸೆ ಟ್ವಿಟ್ಟರ್ ಸಿಇಒ ಆಗಿ ಮತ್ತೆ ಬರಲಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದ್ದ ಬೆನ್ನಲ್ಲೇ ಡೋರ್ಸೆ ಮಂಡಳಿಯಿಂದ ಕೆಳಗಿಳಿದು, ಮತ್ತೆ ಟ್ವಿಟ್ಟರ್ ಸಿಇಒ ಆಗಿ ಹಿಂದಿರುಗುವುದಿಲ್ಲ ಎಂದು ಬಹಿರಂಗಪಡಿಸಿದ್ದಾರೆ. ಈ ಮೂಲಕ ಊಹಾಪೋಹಗಳಿಗೆ ಅಂತ್ಯ ಹಾಡಿದ್ದಾರೆ.
ಎಲೋನ್ ಮಸ್ಕ್ ಟ್ವಿಟ್ಟರ್ ಅನ್ನು ಸ್ವಾಧೀನಪಡಿಸಿಕೊಳ್ಳುವ ಹಾದಿಯಲ್ಲಿದ್ದಾರೆ. ಆದರೆ 44 ಬಿಲಿಯನ್ ಡಾಲರ್(ಸುಮಾರು 3 ಲಕ್ಷ ಕೋಟಿ ರೂ.) ಒಪ್ಪಂದವನ್ನು ಅನೇಕ ಕಾರಣಗಳಿಂದಾಗಿ ತಡೆ ಹಿಡಿಯಲಾಗಿದೆ.
ಡಾರ್ಸೆ ಟ್ವಿಟ್ಟರ್ ಸಿಇಒ ಹುದ್ದೆಯಿಂದ ಕೆಳಗಿಳಿದಂದಿನಿಂದ ಮಂಡಳಿಯನ್ನು ತೊರೆಯುವ ಬಗ್ಗೆ ತಿಳಿಸಿದ್ದರು. 2022ರ ಷೇರುದಾರರ ಸಭೆಯಲ್ಲಿ ತಮ್ಮ ಅವಧಿ ಮುಗಿಯುವವರೆಗೆ ಮಂಡಳಿಯ ಭಾಗವಾಗಿಯೇ ಇರುತ್ತೇನೆ ಎಂದು ಹೇಳಿಕೆ ನೀಡಿದರು.