ಸರ್ಕಾರದ ಅವಧಿಯಲ್ಲಿ ನೀಡಿದ 3667 ಎಕರೆ ಭೂಮಿ ಮಂಜೂರಾತಿ ರದ್ದತಿ

ಮಂಗಳವಾರ, 9 ನವೆಂಬರ್ 2021 (21:02 IST)
ಬೆಂಗಳೂರು: ಜಿಂದಾಲ್ ಗೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ನೀಡಿದ್ದ 3667 ಎಕರೆ ಭೂಮಿ ಮಂಜೂರಾತಿ ರದ್ದತಿ ಪತ್ರವನ್ನು ಸರ್ಕಾರ ಹೈ ಕೋಟ್೯ ಗೆ ನೀಡಿದ್ದು, ಕೋಟ್೯ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಯನ್ನು ಸಮಾಪ್ತಿಗೊಳಿಸಿದೆ.
ಜಿಂದಾಲ್ ಗೆ ಭೂಮಿ ಮಂಜೂರು ಸಂಬಂಧ ಪಾಲ್ ಎಂಬುವವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹೈ ಕೋಟ್೯ ನ್ಯಾಯಾಧೀಶರು, ಅರ್ಜಿ ಸಮಾಪ್ತಿಗೊಳಿಸಿ ಆದೇಶಿದೆ.
ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಿಂದಾಲ್ ಕಂಪೆನಿಗೆ 3667 ಎಕರೆ ಭೂಮಿಯನ್ನು ಮಂಜೂರು ಮಾಡಿದ್ದು, ಕೋಟ್ಯಂತರ ರೂ. ಮೌಲ್ಯದ ಭೂಮಿಯನ್ನು ಕಡಿಮೆ ಬೆಲೆ ಮಂಜೂರು ಮಾಡಿದೆ ಎಂದು ಆಕ್ಷೇಪ ವ್ಯಕ್ತವಾಗಿದೆ ಎಂದು  ಅರ್ಜಿ ದಾರರ ಪರ ವಕೀಲ ಹಿರಿಯ ವಕೀಲ ದೊರೆರಾಜು ಕೋಟ್೯ ಗಮನ ಸೆಳೆದಿದ್ದರು. 
ಸರ್ಕಾರ ಪರ ವಕೀಲರು ರಾಜ್ಯ ಸರ್ಕಾರ ನೀಡಿದ ರದ್ದತಿ ಪತ್ರವನ್ನು ಕೋಟ್೯ ಗೆ ಒಪ್ಪಿಸಿದ್ದು, ಕೋಟ್೯ ಅರ್ಜಿ ವಜಾಗೊಳಿಸಿ, ಪ್ರಕರಣ ಸಮಾಪ್ತಿಗೊಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ