ಬೆಂಗಳೂರು : ಪ್ರಾಥಮಿಕ, ಪ್ರೌಢಶಾಲಾ ಮಕ್ಕಳ ಮಧ್ಯಂತರ ರಜೆ ರದ್ದುಪಡಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದೆ.
ಕೊರೊನಾ ಹಿನ್ನಲೆಯಲ್ಲಿ ಈ ವರ್ಷ ಮಕ್ಕಳಿಗೆ ಆನ್ ಲೈನ್ ಶಿಕ್ಷಣ ನೀಡಲಾಗುತ್ತಿದೆ. ಅಲ್ಲದೇ ಈ ವರ್ಷ ಶಾಲೆ ಆರಂಭವಾಗಿದ್ದು ಕೂಡ ತಡವಾಗಿತ್ತು. ಆದಕಾರಣ ಅ.3ರಿಂದ 26ರವರೆಗೆ ಮಕ್ಕಳಿಗೆ ನೀಡಲಾಗುತ್ತಿದ್ದ ಮಧ್ಯಂತರ ರಜೆ ರದ್ದುಪಡಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಆದೇಶಿಸಿದ್ದು, ಈ ಅವಧಿಯಲ್ಲಿ ವಿದ್ಯಾಗಮಾ ತರಗತಿ ಮುಂದುವರಿಸುವಂತೆ ಸೂಚಿಸಿದೆ.