ನಿಂಬೆ ಹಣ‍್ಣನ್ನು ಬಳಸಿದರೆ ಈ ಸಮಸ್ಯೆ ಎದುರಾಗಬಹುದು ಎಚ್ಚರ
ಶುಕ್ರವಾರ, 2 ಅಕ್ಟೋಬರ್ 2020 (08:45 IST)
ಬೆಂಗಳೂರು : ನಿಂಬೆ ಹಣ್ಣು ಆರೋಗ್ಯಕ್ಕೆ ತುಂಬಾ ಉತ್ತಮವೆಂದು ಹೇಳುತ್ತಾರೆ. ಇದರಲ್ಲಿ ಆಂಟಿಆಕ್ಸಿಡೆಂಟ್ ಅಧಿಕವಾಗಿದೆ. ಆದರೆ ಈ ನಿಂಬೆ ಹಣ್ಣನ್ನು ಇಂತವರು ಸೇವಿಸಲೇಬಾರದು. ಇದರಿಂದ ಸಮಸ್ಯೆ ಎದುರಾಗಬಹುದು.
*ನಿಂಬೆ ಹಣ್ಣು ಚರ್ಮವನ್ನು ಡ್ರೈ ಮಾಡುತ್ತದೆ. ಆದಕಾರಣ ಒಣ ಚರ್ಮದ ಸಮಸ್ಯೆ ಇರುವವರು ನಿಂಬೆ ಹಣ್ಣನ್ನು ಸೇವಿಸಬೇಡಿ. ಕೆಲವರು ತಲೆಹೊಟ್ಟನ್ನು ನಿವಾರಿಸಲು ನೆತ್ತಿಗೆ ನಿಂಬೆ ಹಣ್ಣಿನ ರಸವನ್ನು ಹಚ್ಚುತ್ತಾರೆ. ಇದರಿಂದ ಕೂದಲು ಡ್ರೈ ಆಗುತ್ತದೆ. ಹಾಗೇ ನಿಂಬೆ ಹಣ್ಣು ಹಲ್ಲುಗಳ ಮೇಲೆ ಹಾನಿಯುಂಟುಮಾಡುತ್ತವೆ. ಅಲ್ಲದೇ ಇದು ಜೀರ್ಣಕ್ರಿಯೆಯ ಶಕ್ತಿಯನ್ನು ಕಡಿಮೆ ಮಾಡುತ್ತದೆ.