ಬಿಬಿಎಂಪಿಯ ಕೇರ್ ಲೆಸ್ ಕಾಮಗಾರಿ; ಕಾಮಗಾರಿ ಫುಲ್ ಸ್ಲೋ
ಬೆಂಗಳೂರು-ಎರಡು ವರ್ಷ ಕಳೆದ್ರೂ ಬಿಬಿಎಂಪಿ ಸಮುದಾಯ ಭವನ ಕಂಪ್ಲೀಟ್ ಆಗಿಲ್ಲ.ಎಂಟು ತಿಂಗಳಿಂದ ಪುಲಿಕೇಶಿ ನಗರದ ಸಮುದಾಯ ಭವನ ಕಾಮಗಾರಿ ಬಂದ್ ಆಗಿದೆ.ಕಾಕ್ಸ್ ಟೌನ್ ಮತ್ತು ಸುತ್ತಮುತ್ತ ಯಾವುದೇ ಸಮುದಾಯ ಭವನಗಳಿಲ್ಲ.ಬಡ ಮತ್ತು ಕೆಳ ಮಧ್ಯಮ ವರ್ಗದ ಕುಟುಂಬಗಳು ಸಮಾರಂಭಗಳಿಗಾಗಿ ಅನುಕೂಲ ಆಗಬೇಕಿತ್ತು.ಹಳೆ ಕಟ್ಟಡಗಳನ್ನು ಕೆಡವಿ ಹೊಸ ಕಟ್ಟಡ ನಿರ್ಮಾಣಕ್ಕೆ ಮುಂದಾಗಿತ್ತು.ಕಾಮಗಾರಿ ಆರಂಭಗೊಂಡು ಎರಡು ವರ್ಷ ಕಳೆದರೂ ಶೇ. 50ರಷ್ಟೂ ಮಾತ್ರ ಕಂಪ್ಲೀಟ್ ಆಗಿದೆ ಇದರಿಂದ ಪುಲಿಕೇಶಿ ನಗರ, ಕಾಕ್‌ಟೌನ್, ಕಲ್ಲಹಳ್ಳಿ ನಿವಾಸಿಗಳಿಗೆ ಬೇಸರವಾಗಿದೆ. ಅರ್ಧಂಬರ್ದ ಕಟ್ಟಡ ವಸತಿ ರಹಿತರಿಗೆ ಆಶ್ರಯವಾಗಿ ಮಾರ್ಪಟ್ಟಿದೆ.ರಾತ್ರಿಯಾದ್ರೆ ಅನೈತಿಕ ಚಟುವಟಿಕೆಗಳ ತಾಣವಾಗುತ್ತೆ ಎಂದು ಬಿಬಿಎಂಪಿಯ ನಿರ್ಲಕ್ಷ್ಯಕ್ಕೆ ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.