ಮಲ್ಲೇಶ್ವರಂ ಭಾಗದಲ್ಲಿ ಬೀದಿಬದಿ ಅಂಗಡಿಗಳ ಎತ್ತಂಗಡಿ ಅಪರೇಷನ್

geetha

ಬುಧವಾರ, 31 ಜನವರಿ 2024 (20:13 IST)
ಬೆಂಗಳೂರು-ಹೈ ಕೋರ್ಟ್ ಛೀಮಾರಿ ಹಾಕಿದ ಬಳಿಕ ಮತ್ತೊಮ್ಮೆ ಬಿಬಿಎಂಪಿ ಎಚ್ಚೇತ್ತುಕೊಂಡಿದೆ.ಯಾರು ಪರ್ಮಿಷನ್ ಇಲ್ಲದೆ ವ್ಯಾಪಾರ ಮಾಡುತ್ತಿದ್ದಾರೆ ಅಂತವರ ತೆರವು ಕಾರ್ಯಚರಣೆ ಮಾಡಲಾಗಿದೆ. ಇನ್ನು ಬೀದಿಬದಿ ವ್ಯಾಪಾರಿಗಳು ಬಿಬಿಎಂಪಿ ಹಾಗೂ ಬೀದಿಬದಿ ವ್ಯಾಪಾರ ಸಂಘದಲ್ಲಿ ಪರಮೀಷನ್ ಇದ್ದವರಿಗೆ ಮಾತ್ರ ವ್ಯಾಪಾರ ಮಾಡಲು ಅವಕಾಶ ಇದೆ.ಪರಮೀಷನ್ ಇದ್ದವರಿಗೆ ಮುಂದಿನ ದಿನಗಳಲ್ಲಿ ಜಾಗ ಗುರುತಿಸಿ ಬಾಡಿಗೆ ರೂಪದಲ್ಲಿ ನೀಡಲು ತಯಾರಿ ನಡೆಸಲಾಗಿದೆ ಹೀಗಾಗಿ ಮಲ್ಲೇಶ್ವರಂ ಭಾಗದಲ್ಲಿ ಸ್ಥಳ ಬಿಬಿಎಂಪಿ ಅಧಿಕಾರಿಗಳು ಪರಿಶೀಲನೆ ಮಾಡುತ್ತಿದ್ದಾರೆ.ಇನ್ನೂ ವ್ಯಾಪಾರಿಗಳು  ಕರ್ನಾಟಕದವರಾಗಿದ್ದರೆ ಮಾತ್ರ ಅವಕಾಶ ನೀಡಿದ್ದಾರೆ.ಫ್ಯಾನ್, ಆಧಾರ್ ನಂಬರ್ ಪ್ರತಿಯೊಂದು ಮಾಹಿತಿ ಅಧಿಕಾರಿಗಳು ಕಲೆ ಹಾಕ್ತಿದ್ದಾರೆ.ಬೀದಿ ಬದಿ ವ್ಯಾಪಾರ ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯಾಚರಣೆ ನಡರಸಲಾಗ್ತಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ