ಸತ್ತವರ ವೋಟ್ ಪಡೆದ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು...

ಗುರುವಾರ, 13 ಅಕ್ಟೋಬರ್ 2016 (15:32 IST)
ಚುನಾವಣೆಯಲ್ಲಿ ಸತ್ತವರ ವೋಟ್‌ನ್ನು ಸೇರಿಸಿಕೊಂಡು ನನಗೆ ಕೊಟ್ಟಿದ್ದೀರಿ ಎಂದು ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ದೂರು ದಾಖಲಾಗಿದೆ.
2008 ರ ಸಾಲಿನಲ್ಲಿ ನಡೆದ ಚುನಾವಣೆಯ ಕುರಿತು ತನಿಖೆ ನಡೆಯಬೇಕು ಎಂದು ಆಗ್ರಹಿಸಿ ಮರಿಲಿಂಗೇಗೌಡ ಮಾಲಿ ಪಾಟೀಲ್ ಎನ್ನುವವರು ಮುಖ್ಯಮಂತ್ರಿ ವಿರುದ್ಧ ದೂರು ದಾಖಲಿಸಿದ್ದಾರೆ. 
 
ಮೈಸೂರು ಜಿಲ್ಲೆಯ ಕಂಪೇಗೌಡನಹುಂಡಿ ಗ್ರಾಮದಲ್ಲಿ ನಡೆದ ವಿವಿಧ ಕಾಮಗಾರಿಗಳ ಶಂಕು ಸ್ಥಾಪನೆ ಸಮಾರಂಭದಲ್ಲಿ ಸತ್ತವರನ್ನು ಸೇರಿಸಿಕೊಂಡು 687 ಕ್ಕೆ 687 ವೋಟ್‌ ನನಗೆ ನೀಡಿದ್ದೀರಾ ಎಂದು ಸಿಎಂ ವಿವಾದಾತ್ಮಕ ಹೇಳಿಕೆ ನೀಡಿದ್ದರು
 
1978 ರಿಂದಲೂ ನನಗೆ ನೂರಕ್ಕೂ ನೂರು ವೋಟ್ ಹಾಕಿದ್ದೀರಾ. ಬೈ ಎಲೆಕ್ಷನ್‌ನಲ್ಲೂ ಸಹ ಅಷ್ಟು ವೋಟ್ ನನಗೆ ಹಾಕಿದ್ದೀರಾ. ಈ ಗ್ರಾಮದ ಜನತೆ ನನ್ನ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ಎಷ್ಟು ಬೆಲೆ ಕಟ್ಟಿದರು ಕಡಿಮೆಯೇ ಎಂದು ಗ್ರಾಮದ ಜನತೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ವ್ಯಕ್ತಪಡಿಸಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ