ಫುಟ್ ಪತ್ ಬ್ಲಾಕ್ ಮಾಡಿದ್ರೆ ಕೇಸ್..!!!

ಗುರುವಾರ, 4 ಆಗಸ್ಟ್ 2022 (18:22 IST)
ದಿನ ರಸ್ತೆ‌ ಮೇಲೆ ಸಂಚಾರ ನಿಯಮ‌ ಉಲ್ಲಂಘನೆ ಮಾಡಿದ್ರೆ, ನೋ ಪಾರ್ಕಿಂಗ್​ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸಿದ್ರೆ ಮಾತ್ರ ಟ್ರಾಫಿಕ್ ಪೊಲೀಸರು ಕೇಸ್ ಹಾಕುತ್ತಿದ್ದರು.
ಬೆಂಗಳೂರು ಸಂಚಾರ ಪೊಲೀಸರು ಸಿಆರ್​ಪಿಸಿ 107 ಭದ್ರತಾ ಕಾಯ್ದೆಯಡಿ ಕೇಸ್ ದಾಖಲು ಮಾಡ್ತಿದ್ದಾರೆ. ಎಷ್ಟೇ ಹೇಳಿದ್ರೂ ಅಂಗಡಿ ಮುಂಗಟ್ಟುಗಳ ಮುಂದೆ ಪಾದಚಾರಿ ಮಾರ್ಗ ಅತಿಕ್ರಮಣ ಮಾಡಿ ವಾಹನ‌ ಪಾರ್ಕ್ ಮಾಡೋದು ಜಾಸ್ತಿಯಾಗಿತ್ತು.
 
ಈ ಹಿನ್ನೆಲೆ ರಾಜಾಜಿನಗರ ಸಂಚಾರ ಪೊಲೀಸರು ಇಬ್ಬರು ಅಂಗಡಿ ಮಾಲೀಕರ ಮೇಲೆ ಕೇಸ್ ದಾಖಲಿಸಿ ಉತ್ತರ ವಿಭಾಗ ಕಾನೂನು ಸುವ್ಯವಸ್ಥೆ ಡಿಸಿಪಿ ಮುಂದೆ ಹಾಜರುಪಡಿಸಿದ್ದಾರೆ. ಆರೋಪಿಗಳಿಗೆ ಪಾದಚಾರಿ ಮಾರ್ಗ ಬ್ಲಾಕ್ ಮಾಡದಂತೆ ಎಚ್ಚರಿಕೆ‌ ನೀಡಿ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ