ಹಿಂದಿ ನಟ ಮಿಥಿಲೇಶ್ ಚತುರ್ವೇದಿ ನಿಧನ

ಗುರುವಾರ, 4 ಆಗಸ್ಟ್ 2022 (14:03 IST)
ಕೋಯಿ ಮಿಲ್ ಗಯಾ, ಅಶೋಕ, ಗದರ್ ಏಕ್ ಪ್ರೇಮ್ ಕಥಾ, ರೆಡಿ ಚಿತ್ರಗಳು ಸೇರಿದಂತೆ ಕಿರುತೆರೆಯಲ್ಲಿಯೂ ತಮ್ಮದೇ ಸ್ಥಾನ ಗಿಟ್ಟಿಸಿಕೊಂಡಿದ್ದ ರಂಗಭೂಮಿ ಮತ್ತು ಹಿಂದಿ ಸಿನಿರಂಗದ ಹಿರಿಯ ನಟ ಮಿಥಿಲೇಶ್ ಚತುರ್ವೇದಿ ನಿಧನರಾಗಿದ್ದಾರೆ.
 
ಗುರುವಾರ ಬೆಳಗ್ಗೆ ಚಲನಚಿತ್ರ ನಿರ್ಮಾಪಕ ಹನ್ಸಲ್ ಮೆಹ್ತಾ ತಮ್ಮ ಸಾಮಾಜಿಕ ಮಾಧ್ಯಮಗಳಲ್ಲಿ ಈ ದುಖಃದ ಸುದ್ದಿಯನ್ನು ಹಂಚಿಕೊಂಡಿದ್ದಾರೆ.
 
ಮಿಥಿಲೇಶ್ ಚತುರ್ವೇದಿ ಅವರ ಚಿತ್ರವನ್ನು ಹಂಚಿಕೊಂಡು "RIP Mithileshji" ಎಂದು ಸಂತಾಪ ಸೂಚಿಸಿದ್ದಾರೆ.
 
ವರದಿಗಳ ಪ್ರಕಾರ, ಹಿರಿಯ ನಟ ಮಿಥಿಲೇಶ್ ಚತುರ್ವೇದಿ ತಮ್ಮ ತವರು ಲಕ್ನೋದಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದ ಆಗಸ್ಟ್ 3 ರಂದು ನಿಧನರಾಗಿದ್ದಾರೆ. ಅವರ ಅಳಿಯ ಆಶಿಶ್ ಕೂಡ ಫೇಸ್‌ಬುಕ್‌ನಲ್ಲಿ ಭಾವನಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸಾವಿಗೆ ಸಂತಾಪ ಸೂಚಿಸಿದ್ದಾರೆ.
 
"ನೀವು ವಿಶ್ವದ ಅತ್ಯುತ್ತಮ ತಂದೆ, ನಿಮ್ಮ ಸ್ವಂತ ಮಗನಂತೆ ನನಗೆ ಪ್ರೀತಿಯನ್ನು ನೀಡಿದ್ದೀರಿ" ಎಂದು ನಟ ಮಿಥಿಲೇಶ್ ಚತುರ್ವೇದಿ ಅವರ ಅಳಿಯ ಆಶಿಶ್ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
 
ನಟನ ಸಾವಿನ ಸುದ್ದಿ ತಿಳಿದ ನಂತರ ನಟರು, ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಸಂತಾಪ ಸೂಚಿಸಿದ್ದಾರೆ.
 
ಪ್ರಸಿದ್ಧ ರಂಗಭೂಮಿ ಮತ್ತು ಚಲನಚಿತ್ರ ನಟ ಮಿಥಿಲೇಶ್ ಚತುರ್ವೇದಿ ಹೃದಯಾಘಾತದಿಂದ ನಿಧನರಾದರು. ಅವರ ಅಗಲಿದ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಟ್ವೀಟ್ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ