ಕಾವೇರಿ ವಿವಾದ: ನ್ಯಾಯಧೀಕರಣದಿಂದ ರಾಜ್ಯಕ್ಕೆ ಮಾರಣಾಂತಿಕ ತೀರ್ಪು ಎಂದ ಆರ್.ಅಶೋಕ್

ಮಂಗಳವಾರ, 13 ಸೆಪ್ಟಂಬರ್ 2016 (10:45 IST)
ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಕರದ ತೀರ್ಪು ರಾಜ್ಯಕ್ಕೆ ಮಾರಣಾಂತಿಕ ತೀರ್ಪು ಎಂದು ಬಿಜೆಪಿ ನಾಯಕ ಆರ್.ಅಶೋಕ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ದೊಣ್ಣೆ ಕೊಟ್ಟು ಹೊಡೆಸಿಕೊಂಡಿದೆ. ಈ ಹಿಂದೆ ಕಾವೇರಿ ನದಿಯಿಂದ ತಮಿಳುನಾಡಿಗೆ 15 ಕ್ಯೂಸೆಕ್ ನೀರು ಬಿಡುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಕಾವೇರಿ ವಿಚಾರದಲ್ಲಿ ರಾಜ್ಯ ಸರಕಾರ ಪ್ರಾರಂಭದಲ್ಲೇ ತಪ್ಪು ಮಾಡಿದೆ. ಇದು ರಾಜ್ಯಕ್ಕೆ ಎರಡನೆಯ ಮುಖಭಂಗ ಎಂದು ಆರೋಪಿಸಿದರು.
 
ರಾಜ್ಯ ಸರಕಾರದ ತಪ್ಪು ನಡುವಳಿಕೆಯಿಂದ ಇಂತಹ ಗಲಾಟೆಗ ಅಸ್ಪದ ಮಾಡಿಕೊಟ್ಟಿದೆ. ಈಗಲಾದರೂ ರಾಜ್ಯ ಸರಕಾರ ಎಚ್ಚೆತ್ತುಕೊಳ್ಳಬೇಕಿದೆ ಎಂದರು.
 
ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ದೌರ್ಜನ್ಯ ಮಾಡುತ್ತಿರುವುದು ಸರಿಯಲ್ಲ. ಕೂಡಲೇ ತಮಿಳುನಾಡಿನಲ್ಲಿರುವ ಕನ್ನಡಿಗರಿಗೆ ಸೂಕ್ತ ರಕ್ಷಣೆ ನೀಡುವಂತೆ ಬಿಜೆಪಿ ನಾಯಕ ಆರ್.ಅಶೋ ಆಗ್ರಹಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ