ಜೀವನದಿ ತಲಕಾವೇರಿಯಲ್ಲಿ ಪವಿತ್ರ ತೀರ್ಥೋದ್ಭವ

ಮಂಗಳವಾರ, 17 ಅಕ್ಟೋಬರ್ 2017 (18:47 IST)
ಮಡಿಕೇರಿ: ಕನ್ನಡ ನಾಡಿನ ಜೀವನದಿ ತಲಕಾವೇರಿಯಲ್ಲಿ ಇಂದು  12.33ಕ್ಕೆ ಪವಿತ್ರ ತೀರ್ಥೋದ್ಭವವಾಯಿತು. ರಾಜ್ಯದ ನಾನಾ ಭಾಗದಿಂದ ಬಂದ ಜನ ಈ ಸಂಭ್ರಕ್ಕೆ ಸಾಕ್ಷಿಯಾದರು.

ಈ ಬಾರಿ ಮಧ್ಯಾಹ್ನದ ವೇಳೆಯೇ ತೀರ್ಥೋದ್ಭವವಾದ್ದರಿಂದ ಅನೇಕ ಯಾತ್ರಾರ್ಥಿಗಳು ಬೆಳಗ್ಗೆಯೇ ತಲಕಾವೇರಿಗೆ ಆಗಮಿಸಿದರು. ತಲಕಾವೇರಿಯಿಂದ 10 ಕಿ.ಮೀ. ದೂರದಲ್ಲಿರುವ ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರಗಳಲ್ಲಿ ಭಕ್ತರು ಪಿಂಡ ಪ್ರಧಾನ ಮತ್ತು ತಲೆ ಮುಡಿ ಹರಕೆ ಸಲ್ಲಿಸಿ ಪುಣ್ಯಸ್ನಾನ ಮಾಡಿದರು.

ರಾಜ್ಯ ಮಾತ್ರವಲ್ಲದೆ ಆಂಧ್ರ, ಕೇರಳ, ತಮಿಳುನಾಡು ರಾಜ್ಯಗಳಿಂದ ಅನೇಕ ಭಕ್ತರು ಆಗಮಿಸಿ, ತೀರ್ಥರೂಪಿ ಕಾವೇರಿಯ ಪುಣ್ಯಸ್ನಾನ ಮಾಡಿದರು. ಈ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಜಿಲ್ಲಾ ಎಸ್ಪಿ ರಾಜೇಂದ್ರ ಪ್ರಸಾದ್‌ ನೇತೃತ್ವದಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸಲಾಗಿತ್ತು.

ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ, ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್‌, ಎಂಎಲ್‌ಸಿ ವೀಣಾ ಅಚ್ಚಯ್ಯ, ಮಂಡ್ಯ ಶಾಸಕ ಶ್ರೀಕಂಠೇಗೌಡ, ಅಪ್ಪಾಜಿಗೌಡ ಸೇರಿ ಹಲವರು ತೀರ್ಥೋದ್ಭವ ಸಂದರ್ಭದಲ್ಲಿ ಪಾಲ್ಗೊಂಡಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ