ಕರ್ನಾಟಕಕ್ಕೆ ಕಾವೇರಿ ನದಿ ನೀರಿನ ಮೇಲೆ ಹಕ್ಕಿಲ್ಲವಂತೆ!

ಬುಧವಾರ, 20 ಸೆಪ್ಟಂಬರ್ 2017 (09:42 IST)
ನವದೆಹಲಿ: ಕಾವೇರಿ ನದಿ ನಮ್ಮದು ಎಂದು ನಾವು ಅಭಿಮಾನದಿಂದ ಹೇಳಿಕೊಳ್ಳುತ್ತೇವೆ. ನಮ್ಮ ನಾಡಿನಲ್ಲಿ ಹುಟ್ಟಿ, ನಮ್ಮಲ್ಲೇ ಹರಿದು ತಮಿಳು ನಾಡು ಸೇರುವ ನದಿ ಮೇಲೆ ನಮಗೇ ಹಕ್ಕಿಲ್ಲವಂತೆ! ಹಾಗಂತ ತಮಿಳು ನಾಡು ಪರ ವಕೀಲರು ಸುಪ್ರೀಂ ಕೋರ್ಟ್ ನಲ್ಲಿ ವಾದ ಮಂಡಿಸಿದ್ದಾರೆ.


ಕಾವೇರಿ ನದಿ ನೀರನ್ನು ಬಳಕೆ ಮಾಡಲು ಕರ್ನಾಟಕಕ್ಕೆ ಸಂಪೂರ್ಣ  ಅಧಿಕಾರವಿಲ್ಲ ಎಂದು ತಮಿಳು ನಾಡು ಪರ ವಕೀಲ ಶೇಖರ್ ನಾಫಡೆ ವಾದಿಸಿದ್ದಾರೆ. ಕಾವೇರಿ ಜಲ ವಿವಾದದ ವಿಚಾರಣೆ ಸುಪ್ರೀಂ ಕೋರ್ಟ್ ನಲ್ಲಿ ನಿನ್ನೆ ನಡೆದಿತ್ತು. ಈ ಸಂದರ್ಭದಲ್ಲಿ ತಮಿಳುನಾಡು ವಕೀಲರು ಇಂತಹದ್ದೊಂದು ವಾದ ಮಂಡಿಸಿದ್ದಾರೆ.

ಕರ್ನಾಟಕಕ್ಕೆ ಹಂಚಿಕೆಯಾದ ನೀರನ್ನು ಯಾವ ಉದ್ದೇಶಕ್ಕಾಗಿ ಪಡೆದುಕೊಂಡಿದೆಯೋ ಅದೇ ಉದ್ದೇಶಕ್ಕಾಗಿ ಬಳಸಬೇಕು. ಅದರ ಹೊರತಾಗಿ ಬೇರೆ ಉದ್ದೇಶಗಳಿಗೆ ಬಳಸುವ ಹಕ್ಕು ಅವರಿಗಿಲ್ಲ. ಹಾಗೆ ಮಾಡಿದರೆ ಅದು ಕಾವೇರಿ ನದಿ ನ್ಯಾಯಾಧಿಕರಣದ ಆದೇಶದ ಸ್ಪಷ್ಟ ಉಲ್ಲಂಘನೆಯಾಗುತ್ತದೆ. ಕರ್ನಾಟಕ ನ್ಯಾಯಾಧೀಕರಣದ ಆದೇಶವನ್ನು ಪಾಲಿಸುತ್ತಿಲ್ಲ ಎಂದು ಅವರು ವಾದಿಸಿದ್ದಾರೆ.

ಇದನ್ನೂ ಓದಿ…  ರಾಜಕೀಯ ಬಿಟ್ಟು ಮತ್ತೆ ಬಣ್ಣ ಹಚ್ತಾರಂತೆ ರಮ್ಯಾ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ