ಜೀವನದಿ ಕಾವೇರಿ ತೀರ್ಥೋದ್ಬವಕ್ಕೆ ಸಮಯ ನಿಗದಿ

ಭಾನುವಾರ, 17 ಸೆಪ್ಟಂಬರ್ 2017 (12:09 IST)
ಕೊಡಗು: ಜೀವನದಿ ಕಾವೇರಿಯ ಹುಟ್ಟಿದ ದಿನ ಎಂದೇ ಕರೆಯಲ್ಪಡುವ ಪವಿತ್ರ ತೀರ್ಥೋದ್ಬವ ಈ ಬಾರಿ ಅಕ್ಟೋಬರ್ 17ರಂದು ಅಪರಾಹ್ನ ಜರುಗುಲಿದೆ.

ದೇವಾಲಯದ ಮುಖ್ಯಸ್ಥರ ಪ್ರಕಾರ ಅಕ್ಟೋಬರ್ 17 ರಂದು ಸಲ್ಲುವ ಶುಭ ತುಲಾ ಲಗ್ನದಲ್ಲಿ"ಶ್ರೀ ಮೂಲ ಕಾವೇರಿ ತೀರ್ಥೋಧ್ಬವ ಪುಣ್ಯ ಕಾಲ"ದಲ್ಲಿ ಉಗಮಸ್ಥಾನ ತಲಕಾವೇರಿಯಲ್ಲಿ ಸರಿಯಾಗಿ ಮಧ್ಯಾಹ್ನ 12.33ಕ್ಕೆ ಆಗಲಿದೆ. ಕೊಡಗಿನ ಜಾತ್ರೆ ಎಂದು ಕರೆಸಿಸಿಕೂಳುವ ತೀರ್ಥೋಧ್ಬವದ ಮುನ್ನ ಕಾರ್ಯಕ್ರಮಗಳು ಸೆಪ್ಟೆಂಬರ್ 29ರಿಂದಲೇ ಆರಂಭಗೊಳ್ಳಲಿದ್ದು, ಬೆಳಗ್ಗೆ 8.45ಕ್ಕೆ ತುಲಾ ಲಗ್ನದಲ್ಲಿ 'ಪತಾಯಕ್ಕೆ ಅಕ್ಕಿ' ಹಾಕಲಾಗುತ್ತದೆ. ಅಕ್ಟೋಬರ್ 4ರಂದು  ವೃಶ್ಚಿಕ ಲಗ್ನದಲ್ಲಿ 'ಆಜ್ಞಾ ಮುಹೂರ್ತ', 14 ರಂದು  ಧನುರ್ ಲಗ್ನದಲ್ಲಿ 'ಅಕ್ಷಯ ಪಾತ್ರೆ ಇಡುವುದು', ಕುಂಭಾ ಲಗ್ನದಲ್ಲಿ 'ಕಾಣಿಕೆ ಡಬ್ಬ' ಇಡುವುದು, ಹಾಗೂ 17ರಂದು ತೀರ್ಥೋಧ್ಬವ ಜರುಗಲಿದೆ.

ಅಕ್ಟೋಬರ್ 17 ರಿಂದ ನವೆಂಬರ್ 17ರಂದು ನಡೆಯುವ ಕಿರು ಸಂಕ್ರಮಣದವರೆಗೂ ಶ್ರೀ ಕ್ಷೇತ್ರದಲ್ಲಿ ಹಬ್ಬದ ವಾತಾವರಣವಿರಲಿದೆ. ಈ ಸಂದರ್ಭದಲ್ಲಿ ಪಿಂಡ ಪ್ರಧಾನ, ಕಾವೇರಿ ದರ್ಶನ, ಪುಣ್ಯ ಸ್ನಾನಗಳು ನಡೆಯಲಿದೆ. ಈ ಸಂದರ್ಭ ಕಾವೇರಿ ನದಿ ಹರಿಯುವ ಪ್ರಮುಖ ಸ್ಥಳಗಳಾದ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಸೇರಿದಂತೆ ತಮಿಳುನಾಡಿನ ಭಕ್ತರು ತಂಡೋಪತಂಡವಾಗಿ ಆಗಮಿಸಿ ಕಾವೇರಿ ಮಾತೆಯ ಕೃಪೆಗೆ ಪಾತ್ರವಾಗಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ