Janardhan Reddy: ಶಿಕ್ಷೆ ಕಡಿಮೆ ಮಾಡಿ ಎಂದು ಅಂಗಲಾಚಿದ ಜನಾರ್ಧನ ರೆಡ್ಡಿಗೆ ಕೋರ್ಟ್ ಹೇಳಿದ್ದೇನು: ಇನ್ನು ಜೈಲೂಟ ಫಿಕ್ಸ್

Krishnaveni K

ಮಂಗಳವಾರ, 6 ಮೇ 2025 (17:17 IST)
ಬಳ್ಳಾರಿ: ಗಣಿ ದಣಿ, ಶಾಸಕ ಜನಾರ್ಧನ ರೆಡ್ಡಿ ಓಬಳಾಪುರ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ದೋಷಿ ಎಂದು ತೀರ್ಪು ನೀಡಿದ್ದು 7 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಶಿಕ್ಷೆ ಕಡಿಮೆ ಮಾಡಿ ಎಂದು ಅಂಗಲಾಚಿದ ಜನಾರ್ಧನ ರೆಡ್ಡಿಗೆ ಕೋರ್ಟ್ ಹೇಳಿದ್ದೇನು ಗೊತ್ತಾ?

ಒಬ್ಬ ಶಾಸಕನಿಗೆ 3 ವರ್ಷಕ್ಕಿಂತ ಹೆಚ್ಚು ಶಿಕ್ಷೆ ಘೋಷಣೆಯಾದರೆ ಆತನ ಶಾಸಕ ಸ್ಥಾನವೂ ಕಳೆದುಕೊಳ್ಳಬೇಕಾಗುತ್ತದೆ. ಇದೀಗ ಜನಾರ್ಧನ ರೆಡ್ಡಿ ಪ್ರಕರಣದಲ್ಲೂ ಇದೇ ಆಗಿದೆ. ಸಿಬಿಐ ಕೋರ್ಟ್ ತೀರ್ಪಿನಿಂದ ರೆಡ್ಡಿ ಶಾಸಕ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ. ಜೊತೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ.

ಇದೇ ಕಾರಣಕ್ಕೆ ಅವರು ಶಿಕ್ಷೆ ಪ್ರಮಾಣ ಕಡಿಮೆ ಮಾಡಿ ಎಂದು ಕೋರ್ಟ್ ಬಳಿ ಅಂಗಲಾಚಿದ್ದಾರೆ. ಆದರೆ ಇದನ್ನು ಕೋರ್ಟ್ ನಿರಾಕರಿಸಿದ್ದು ನೀವು ಮಾಡಿರುವ ಹಗರಣಕ್ಕೆ ನಿಮಗೆ ಜೀವಾವಧಿ ಶಿಕ್ಷೆ ನೀಡಬೇಕು ಎಂದು ಖಾರವಾಗಿ ಪ್ರತಿಕ್ರಿಯಿಸಿದೆ.

ಓಬಳಾಪುರ ಅಕ್ರಮ ಗಣಿಕಾರಿಕೆ ಪ್ರಕರಣದಲ್ಲಿ ರೆಡ್ಡಿ 884 ಕೋಟಿ ರೂ. ಅಕ್ರಮವೆಸಗಿರುವುದು ಸಾಬೀತಾಗಿರುವ ಹಿನ್ನಲೆಯಲ್ಲಿ ಸಿಬಿಐ ಕೋರ್ಟ್ ಈ ತೀರ್ಪು ನೀಡಿದೆ. ಹಾಗಿದ್ದರೂ ಒಂದು ತಿಂಗಳೊಳಗಾಗಿ ಜನಾರ್ಧನ ರೆಡ್ಡಿ ಹೈಕೋರ್ಟ್ ಗೆ ಮನವಿ ಸಲ್ಲಿಸಬಹುದು. ಹೈಕೋರ್ಟ್ ತಡೆ ಒಡ್ಡಿದರೆ ಮಾತ್ರ ರೆಡ್ಡಿಗೆ ರಿಲೀಫ್ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ