ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಸಿಸಿಬಿ ಇನ್ಸ್ ಪೆಕ್ಟರ್ ಹಾಗೂ ಮುಖ್ಯ ಪೇದೆ ಅಮಾನತು

ಶನಿವಾರ, 12 ಜನವರಿ 2019 (10:56 IST)
ಬೆಂಗಳೂರು : ಲಂಚಕ್ಕೆ ಬೇಡಿಕೆಯಿಟ್ಟ ಆರೋಪದ ಮೇಲೆ ಸಿಸಿಬಿಯ ಒಸಿಡಬ್ಲ್ಯು ವಿಂಗ್ ನ ಇನ್ಸ್ ಪೆಕ್ಟರ್ ಹಾಗೂ ಮುಖ್ಯ ಪೇದೆಯನ್ನು ಅಮಾನತು ಮಾಡುವಂತೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಆದೇಶಿಸಿದ್ದಾರೆ.


AIMMS ಚಿಟ್ ಫಂಡ್ ಕಂಪೆನಿಯಿಂದ ಜನರಿಗೆ ಮೋಸವಾದ ಹಿನ್ನಲೆಯಲ್ಲಿ ಸಿಸಿಬಿಯ ಒಸಿಡಬ್ಲ್ಯು ವಿಂಗ್ ನ ಇನ್ಸ್ ಪೆಕ್ಟರ್ ಪ್ರಕಾಶ್ ಹಾಗೂ ಮುಖ್ಯ ಪೇದೆ  ಸತೀಶ್ ವಿಚಾರಣೆ ನೆಪದಲ್ಲಿ AIMMS ಚಿಟ್ ಫಂಡ್ ಕಂಪೆನಿ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.


ಈ ಇಬ್ಬರು ಒಂದು ಕೋಟಿಗೆ ಬೇಡಿಕೆ ಇಟ್ಟು 35 ಲಕ್ಷ ರೂ.ಪಡೆದಿದ್ದು, ಈ ಬಗ್ಗೆ ಡಿಸಿಪಿ ಗಿರೀಶ್ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ಇನ್ಸ್ ಪೆಕ್ಟರ್  ಹಾಗೂ ಪೇದೆಯನ್ನ ಅಮಾನತು ಮಾಡುವಂತೆ ಟಿ.ಸುನೀಲ್ ಕುಮಾರ್ ರಿಂದ ಆದೇಶಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ