ರೇಸ್ ಕೋರ್ಸ್ ಮೇಲೆ ಸಿಸಿಬಿ ಪೊಲೀಸರ ರೇಡ್

geetha

ಶನಿವಾರ, 13 ಜನವರಿ 2024 (14:22 IST)
ಬೆಂಗಳೂರು-ರೇಸ್ ಕೋರ್ಸ್ ಮೇಲೆ ಸಿಸಿಬಿ ಪೊಲೀಸರು ದಾಳಿ‌ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.ನಿಗಧಿ ದರಗಳಿಗಿಂತ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಮಾಡಲಾಗ್ತಿದೆ ಎಂದು ರೇಸ್ ಕೋರ್ಸ್ ಬುಕ್ಕಿ ಕೌಂಟರ್ ಮೇಲೆ ದಾಳಿ ನಡೆಸಲಾಗಿದೆ.ಗ್ರಾಹಕನಿಂದ ಅಧಿಕ ಹಣ ಪಡೆದು ಕಡಿಮೆ ಮೊತ್ತದ ಟಿಕೆಟ್ ನೀಡಿ ಸರ್ಕಾರಕ್ಕೆ ವಂಚನೆ ಮಾಡಲಾಗ್ತಿದೆ.
 
ಜಿಎಸ್ ಟಿ ಕಟ್ಟದೆ ವಂಚನೆ ಮಾಡಿದ ಆರೋಪ ಹಿನ್ನಲೆ ದಾಳಿ ವೇಳೆ ಒಂದು ಕೋಟಿಗೂ ಅಧಿಕ ಹಣ ವಶಕ್ಕೆ ಪಡೆಯಲಾಗಿದೆ.ಬುಕ್ಕಿ ಕೌಂಟರ್ ಗಳನ್ನ ಸಿಸಿಬಿ ಪೊಲೀಸರು ಲಾಕ್ ಮಾಡಿದ್ದಾರೆ.ಒಂದೊಂದು ಕೌಂಟರ್ ಗೂ ಸಿಬ್ಬಂದಿಗಳಿಂದ ಭದ್ರತೆ ವ್ಯವಸ್ಥೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ