ಕೇಂದ್ರ ಬಜೆಟ್: ಯಾವುದು ಅಗ್ಗ – ಏನೆಲ್ಲಾ ದುಬಾರಿ?

ಶುಕ್ರವಾರ, 5 ಜುಲೈ 2019 (14:42 IST)
ಎನ್‌ಡಿಎ ಸರಕಾರದ ಎರಡನೇ ಅವಧಿಯ ಮೊದಲ ಬಜೆಟ್‌ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮಂಡಿಸಿದ್ದು, ಬಡ ಹಾಗೂ ಮಧ್ಯಮ ಜನರು ಬಹುಪಾಲು ನಿರಾಶೆ ಅನುಭವಿಸುವಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಸೆಸ್‌ ಏರಿಕೆ ಮಾಡಲಾಗಿದ್ದು, ಬಂಗಾರದ ಮೇಲಿನ ಆಮದು ಸುಂಕವನ್ನು ಹೆಚ್ಚಿಸುವ ಮೂಲಕ ಚಿನ್ನ ಪ್ರಿಯರಿಗೆ ಬರೆ ಹಾಕಲಾಗಿದೆ.

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು 2019-20ರ ಸಾಲಿನ ಬಜೆಟ್ ಮಂಡನೆ ಮಾಡಿದ್ದು ಯಾವುದು ದುಬಾರಿ, ಯಾವುದು ಅಗ್ಗ ಎಂಬ ಮಾಹಿತಿ ಇಲ್ಲಿದೆ.

ಯಾವುದು ಅಗ್ಗ ಗೊತ್ತಾ?
* ಪೇಪರ್ಸ್
* ಇಥಲಿನ್
* ಪಾಮ್ ಆಯಿಲ್
* ಫ್ಯಾಟಿ ಆಯಿಲ್
* ಕೋಬಾಲ್ಟ್
* ಕೃತಕ ಕಿಡ್ನಿ, ಶಸ್ತ್ರ ಚಿಕಿತ್ಸೆ ಉಪಕರಣಗಳು
* ಚರ್ಮೋತ್ಪನ್ನ
* ಡಯಾಲಿಸಿಸ್ ಯಂತ್ರ ಮತ್ತು ಪರಿಕರಗಳು

ಇವು ಬಲು ತುಟ್ಟಿ 
* ಆಟೋ ಬಿಡಿಭಾಗಗಳು
* ತಂಬಾಕು ಉತ್ಪನ್ನ
* ಪೆಟ್ರೋಲ್, ಡೀಸೆಲ್
* ಪಿವಿಸಿ ಪೈಪ್ಸ್
* ಬಂಗಾರ, ಬೆಳ್ಳಿ
* ಟೈಲ್ಸ್, ಮಾರ್ಬಲ್
* ವಿನೈಲ್ ಫ್ಲೋರ್ಸ್ 
* ರಬ್ಬರ್ 
* ಸಿಸಿಟಿವಿ ಕ್ಯಾಮೆರಾ ಡಿವಿಡಿ ಐಪಿ ಕ್ಯಾಮೆರಾ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ