ಜಿಂದಾಲ್ ಭೂಮಿ ಪರಭಾರೆ ಮಾಡುವ ಬದಲು ನಮಗೆ ಕೊಡಿ- ಸಿಎಂಗೆ ಪತ್ರ ಬರೆದ ರೈತರು

ಸೋಮವಾರ, 24 ಜೂನ್ 2019 (12:27 IST)
ಬೆಂಗಳೂರು : ಜಿಂದಾಲ್ ಭೂಮಿ ಪರಭಾರೆ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ ಸ್ಥಳಿಯ ರೈತರು ಪತ್ರ ಚಳುವಳಿ ಶುರುಮಾಡಿದ್ದಾರೆ.




ಜಿಂದಾಲ್ ಕಂಪೆನಿಗೆ ಕೊಡುವ ಭೂಮಿಯನ್ನು ಪರಭಾರೆ ಮಾಡುವ ಬದಲು ರೈತರಿಗೆ ಕೊಡಿ ಎಂದು ಸಂಡೂರು ತಾಲೂಕಿನ ತೋರಣಗಲ್ಲು ನಿವಾಸಿಗಳು ಸಿಎಂ ಕುಮಾರಸ್ವಾಮಿಗೆ  ಪತ್ರದ ಮೂಲಕ ಮನವಿ ಮಾಡಿದ್ದಾರೆ.


ಜಿಂದಾಲ್ ಕಂಪೆನಿಗೆ ಕೊಡುವ ಭೂಮಿಯಲ್ಲಿ ಒಂದರಿಂದ ಎರಡು ಎಕರೆ ಜಮೀನು ರೈತರಿಗೆ ದಾನವಾಗಿ ಕೊಡಿ. ಭೂಮಿ ಕೊಟ್ಟರೆ ಕೃಷಿ ಮಾಡಿ ಜೀವನ ಸಾಗಿಸುತ್ತೇವೆಂದು ಪತ್ರದಲ್ಲಿ ಉಲ್ಲೇಖ ಮಾಡುವುದರ ಮೂಲಕ ಸಿಎಂಗೆ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ