ಬಜೆಟ್ ಮಂಡನೆಗೆ ಮೊದಲು ಹಳೇ ಪದ್ಧತಿಗೆ ತಿಲಾಂಜಲಿಯಿಟ್ಟ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್

ಶುಕ್ರವಾರ, 5 ಜುಲೈ 2019 (10:05 IST)
ನವದೆಹಲಿ: ಸಾಮಾನ್ಯವಾಗಿ ಕೇಂದ್ರ ಬಜೆಟ್ ಮಂಡನೆ ವೇಳೆ ಸಚಿವರು ಬಜೆಟ್ ಪ್ರತಿಯ ಸೂಟ್ ಕೇಸ್ ಹಿಡಿದುಕೊಂಡು ಸಂಸತ್ ಗೆ ಪ್ರವೇಶಿಸುವುದು ವಾಡಿಕೆ.


ಇದುವರೆಗೂ ಈ ಪದ್ಧತಿ ನಡೆದುಕೊಂಡು ಬಂದಿದೆ. ಅದು ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ. ಯಾವುದೇ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದ್ದರೂ ಈ ಪದ್ಧತಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ ಈ ಬಾರಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಪದ್ಧತಿಗೆ ತಿಲಾಂಜಲಿಯಿಟ್ಟಿದ್ದಾರೆ.

ಪೂರ್ಣಪ್ರಮಾಣದ ಮಹಿಳಾ ಹಣಕಾಸು ಸಚಿವೆ ಎಂಬ ಹೆಗ್ಗಳಿಕೆ ಹೊಂದಿರುವ ನಿರ್ಮಲಾ ಸೀತಾರಾಮನ್ ತಮ್ಮ ಸಚಿವಾಲಯದಿಂದ ಸಂಸತ್ ಗೆ ಸಾಗುವಾಗ ಎಂದಿನ ಬ್ರೀಫ್ ಕೇಸ್ ತೆಗೆದುಕೊಂಡು ಹೋಗಿಲ್ಲ. ಬದಲಾಗಿ ಕೆಂಪು ಬಣ್ಣದ ಫೈಲ್ ನಂತಿರುವ ಕವರ್ ನಲ್ಲಿ ಬಜೆಟ್ ಪ್ರತಿ ತೆಗೆದುಕೊಂಡು ಹೋಗಿದ್ದಾರೆ. ಈ ಮೂಲಕ ಇದುವರೆಗೆ ನಡೆದುಕೊಂಡು ಬಂದ ಪದ್ಧತಿಗೆ ಬ್ರೇಕ್ ಹಾಕಿ ಹೊಸ ಪದ್ಧತಿ ಆರಂಭಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ