ಕೇಂದ್ರ ಸರಕಾರ ನಾವು ಕೇಳಿದಷ್ಟು ಪರಿಹಾರ ನೀಡಬೇಕು: ಸಚಿವ ಕೃಷ್ಣಭೈರೆಗೌಡ

ಬುಧವಾರ, 11 ಜನವರಿ 2017 (18:19 IST)
ಕಳೆದ ವರ್ಷ ಮಹಾರಾಷ್ಟ್ರ ಸರಕಾರ ಕೇಳಿದಷ್ಟು ಪರಿಹಾರವನ್ನು ಕೇಂದ್ರ ಸರಕಾರ ನೀಡಿತ್ತು. ಇದೀಗ ನಮ್ಮ ಸ್ಥಿತಿ ಅದಕ್ಕಿಂತ ಗಂಭೀರವಾಗಿದೆ. ನಾವು ಕೇಳಿದಷ್ಟು ಪರಿಹಾರ ನೀಡಬೇಕು ಎಂದು ಸಚಿವ ಕೃಷ್ಣಬೈರೇಗೌಡ ಕೇಂದ್ರ ಸರಕಾರವನ್ನು ಒತ್ತಾಯಿಸಿದ್ದಾರೆ.
 
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬರ ಪರಿಹಾರಕ್ಕಾಗಿ ಕೇಂದ್ರ ಸರಕಾರ ನೀಡಿರುವ ಅನುದಾನ ಸಾಕಾಗೊಲ್ಲ. ನಾವು 4702 ಕೋಟಿ ಹೇಳಿದ್ದೇವು. ಆದರೆ, ಕೇಂದ್ರ ಸರಕಾರ 1780 ಕೋಟಿ ರೂಪಾಯಿ ನೀಡಿದೆ. ನಮ್ಮ ನಿರೀಕ್ಷೆ ಹುಸಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು. 
 
ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕೇಂದ್ರ ಸರಕಾರಕ್ಕೆ ಪತ್ರ ಬರೆದಿದ್ದಾರೆ. ಆದರೆ, ಕೇಂದ್ರ ಸರಕಾರ ಯಾವ ನಿರ್ಧಾರ ಕೈಗೊಳ್ಳುತ್ತೆ ನೋಡೋಣ ಎಂದರು. 
 
ಘೋಷಿತ ಬರ ಪರಿಹಾರ ಹಣವನ್ನು ಕೇಂದ್ರ ಸರಕಾರ ಇನ್ನೂ ಬಿಡುಗಡೆ ಮಾಡಿಲ್ಲ. ಈ ಬಗ್ಗೆ ಸರಕಾರದಿಂದ ಯಾವುದೇ ಮಾಹಿತಿ ಬಂದಿಲ್ಲ. ಆದಷ್ಟು ಬೇಗ ಭರವಸೆ ನೀಡಿರುವ ಅನುದಾನವನ್ನು ಬಿಡುಗಡೆ ಮಾಡಿದರೆ ರೈತರಿಗೆ ವಿತರಿಸಬಹುದು. ಹೀಗಾಗಿ ಕೇಂದ್ರ ಸರಕಾರ ಹಣ ಬಿಡುಗಡೆ ಮಾಡಲೇ ಬೇಕು ಎಂದು ಸಚಿವ ಕೃಷ್ಣಬೈರೇಗೌಡ ಆಗ್ರಹಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ