PSI ಪರಶುರಾಮ್ ಪ್ರಕರಣದ ವರದಿ ಕೇಳಿದ ಕೇಂದ್ರ: ರಾಜ್ಯ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ

Krishnaveni K

ಗುರುವಾರ, 5 ಸೆಪ್ಟಂಬರ್ 2024 (12:26 IST)
ಬೆಂಗಳೂರು: ಪಿಎಸ್ ಐ ಪರಶುರಾಮ್ ಅನುಮಾನಾಸ್ಪದ ಸಾವಿನ ಪ್ರಕರಣ ಈಗ ರಾಜ್ಯ ಸರ್ಕಾರಕ್ಕೆ ಉರುಳಾಗುವ ಸಾಧ್ಯತೆಯಿದೆ. ಈ ಪ್ರಕರಣದ ಬಗ್ಗೆ ಕೇಂದ್ರ ರಾಜ್ಯ ಸರ್ಕಾರದ ಬಳಿ ವರದಿ ಕೇಳಿದೆ.

ಯಾದಗಿರಿ ಪಿಎಸ್ ಐ ಪರಶುರಾಮ್ ಸಾವಿನ ಬಗ್ಗೆ ಸಿಬಿಐ ತನಿಖೆ ಮಾಡಬೇಕು ಎಂದು ಈಗಾಗಲೇ ಸಂಸದೆ ಶೋಭಾ ಕರಂದ್ಲಾಜೆ ಕೇಂದ್ರಕ್ಕೆ ಪತ್ರ ಬರೆದಿದ್ದರು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ ಈ ಪ್ರಕರಣದ ಬಗ್ಗೆ ವರದಿ ನೀಡುವಂತೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದೆ. ಇದರಿಂದ ಈ ಪ್ರಕರಣ ರಾಜ್ಯಕ್ಕೆ ಮತ್ತೊಂದು ಉರುಳಾಗುವ ಸಾಧ್ಯತೆಯಿದೆ.

ಪಿಎಸ್ ಐ ಪರಶುರಾಮ್ ಸಾವಿನ ಪ್ರಕರಣದಲ್ಲಿ ರಾಜ್ಯ ಸರ್ಕಾರದ ತನಿಖೆ ತೃಪ್ತಿಕರವಾಗಿಲ್ಲ ಎಂದು ಶೋಭಾ ಕರಂದ್ಲಾಜೆ ಕೇಂದ್ರಕ್ಕೆ ಪತ್ರ ಬರೆದಿದ್ದರು. ಇದಕ್ಕೀಗ ಕೇಂದ್ರ ಗೃಹ ಸಚಿವಾಲಯ ಪ್ರತಿಕ್ರಿಯಿಸಿದೆ. ಯಾದಗಿರಿ ಪಿಎಸ್ ಐ ಪರಶುರಾಮ್ ಸಾವಿನ ಪ್ರಕರಣವನ್ನು ಸಿಐಡಿ ಅಧಿಕಾರಿಗಳು ನಡೆಸಿದ್ದಾರೆ.

ಆದರೆ ತನಿಖೆಯಲ್ಲಿ ಹೆಚ್ಚು ಪ್ರಗತಿ ಕಂಡುಬಂದಿಲ್ಲ ಎಂದು ಸಂಸದೆ ಆರೋಪಿಸಿದ್ದರು. ಈಗ ತನಿಖೆಗೆ ಕೇಂದ್ರ ತನಿಖಾ ದಳ ಎಂಟ್ರಿ ಕೊಟ್ಟರೆ ಮತ್ತೆ ರಾಜ್ಯ, ಕೇಂದ್ರದ ನಡುವೆ ಮತ್ತೊಂದು ಸುತ್ತಿನ ಜಟಾಪಟಿ ನಡೆಯುವುದು ಖಂಡಿತಾ. ಈಗಾಗಲೇ ಮುಡಾ, ವಾಲ್ಮೀಕಿ ಹಗರಣದ ಸುಳಿಯಲ್ಲಿರುವ ರಾಜ್ಯ ಸರ್ಕಾರಕ್ಕೆ ಈ ಪ್ರಕರಣ ಮತ್ತೊಂದು ಉರುಳಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ