ಬಿಟ್ಟು ಹೋದ ಬ್ಯಾಗ್ ಮರಳಿಸಿ ಪ್ರಮಾಣಿಕತೆ ಮೆರೆದ ಆಟೋ ಚಾಲಕ

ಶುಕ್ರವಾರ, 25 ಅಕ್ಟೋಬರ್ 2019 (15:10 IST)
ಆಟೋ ಚಾಲಕರೊಬ್ಬರು ಪ್ರಾಮಾಣಿಕತೆ ಮೆರೆದಿರೋದು ಮತ್ತೆ ಮಾದರಿಯಾಗಿದೆ.
 

ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್ ನ್ನು ಆಟೋದಲ್ಲಿ ಬಿಟ್ಟು ಹೋಗಿರೋದನ್ನು ನೋಡಿ ಅವನ್ನು ಪೊಲೀಸರ ಮೂಲಕ ಸಂಬಂಧಿಸಿದವರಿಗೆ ಮರಳಿಸುವ ಮೂಲಕ ಆಟೋ ಚಾಲಕ ಪ್ರಾಮಾಣಿಕತೆ ಮೆರೆದಿದ್ದಾನೆ.

  ಹುಬ್ಬಳ್ಳಿಯ ಟಿಪ್ಪು ನಗರದ ಮಹಮ್ಮದ್ ಜಾಫರ್ ಫನಿಬಂದ ಎಂಬುವರೇ ಬ್ಯಾಗ್ ಮರಳಿಸಿದ ಪ್ರಮಾಣಿಕ ಆಟೋ ಚಾಲಕ. ಆಟೋ ನಿಲ್ಲಿಸಿದ ಸಮಯದಲ್ಲಿ ಸೀಟಿನ ಹಿಂಭಾಗದಲ್ಲಿ ಬ್ಯಾಗ್ ಇರುವುದನ್ನು ಗಮನಿಸಿದ ಚಾಲಕ, ಆ ಬ್ಯಾಗ್ ಮರಳಿ ಕೊಡೋದಕ್ಕೆ ಅಂತ ಮಾಲೀಕರನ್ನು ಹುಡುಕಿದ್ದಾರೆ.

ಆದರೆ ಅವರು ಸಂಪರ್ಕಕ್ಕೆ ಸಿಗದೇ ಹೋದಾಗ ಕಮರಿಪೇಟೆ ಪೊಲೀಸ್ ಠಾಣೆಗೆ ಬ್ಯಾಗ್ ನ್ನು ಒಪ್ಪಿಸಿದ್ದಾರೆ. ನಂತರ ಪೊಲೀಸರು ಬ್ಯಾಗ್ ಮಾಲೀಕರ ವಿಳಾಸ ಪತ್ತೆ ಹಚ್ಚಿದಾಗ ಬೆಂಗಳೂರು ಮೂಲಕ ಸಂತೋಷ ಸೋಳಂಕಿ ಅವರದ್ದು ಎಂದು ತಿಳಿದುಬಂದಿದೆ. ನಂತರ ಅವರನ್ನು ಠಾಣೆಗೆ ಕರೆಯಿಸಿಕೊಂಡು ಆಟೋ ಚಾಲಕನ ಸಮ್ಮುಖದಲ್ಲಿ ಬ್ಯಾಗ್ ಮರಳಿ ಒಪ್ಪಿಸಿದ್ದಾರೆ.

ಬಿಟ್ಟು ಹೋದ ಬ್ಯಾಗ್ ನಲ್ಲಿ ಲ್ಯಾಪ್‌ಟಾಪ್ ಸೇರಿದಂತೆ ಬೆಲೆ ಬಾಳುವ ವಸ್ತುಗಳಿದ್ದವು. ಅವುಗಳನ್ನು ಹಾಗೇ ಇದ್ದ ಬ್ಯಾಗ್ ನ್ನು ಆಟೋ ಚಾಲಕ ಪ್ರಾಮಾಣಿಕತೆಯಿಂದ ಮರಳಿಸಿ ಪೊಲೀಸರು ಮತ್ತು ಸಾರ್ವಜನಿಕರ ಪ್ರಶಂಸೆಗೆ ಪಾತ್ರನಾಗಿದ್ದಾನೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ