ಮಂತ್ರಾಲಯಕ್ಕೆ ಭೇಟಿ ನೀಡಿದ ಬಳಿಕ ಪೀಠಾಧಿಪತಿಯರನ್ನು ಭೇಟಿಯಾದ ಸಚಿವ ರಾಮಲಿಂಗಾರೆಡ್ಡಿ

Sampriya

ಮಂಗಳವಾರ, 15 ಜುಲೈ 2025 (19:17 IST)
Photo Credit X
ರಾಯಚೂರು: ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಅವರು ಇಂದು ಮಂತ್ರಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ನೆರವೇರಿಸಿದ್ದಾರೆ.

ಮಂತ್ರಾಲಯಕ್ಕೆ ಭೇಟಿ ನೀಡಿ ರಾಯರ ಮೂಲ ಬೃಂದಾವನದ ದರ್ಶನ ಪಡೆದಿದ್ದಾರೆ. ಮಂಚಾಲಮ್ಮ ದೇವಿ ದರ್ಶನ ಬಳಿಕ ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಬಳಿಕ ಮಂತ್ರಾಲಯ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳನ್ನ ಭೇಟಿ ಮಾಡಿ ಆಶಿರ್ವಚನ ಪಡೆದರು.

ಸಚಿವರಿಗೆ ಫಲಮಂತ್ರಾಕ್ಷತೆ, ಶೇಷವಸ್ತ್ರ ಸ್ಮರಣಿಕೆಯನ್ನು ನೀಡಿ ಶ್ರೀಗಳು ಆಶೀರ್ವದಿಸಿದ್ದಾರೆ. ಆಗಸ್ಟ್ ತಿಂಗಳಲ್ಲಿ ನಡೆಯಲಿರುವ ರಾಯರ ಆರಾಧನಾ ಮಹೋತ್ಸವಕ್ಕೆ ಶ್ರೀಗಳು ಇದೇ ವೇಳೆ ಆಹ್ವಾನಿಸಿದ್ದಾರೆ‌.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ