ಚಾಲೆಂಜಿಂಗ್ ಸ್ಟಾರ್ ದರ್ಶನ್ ಕಾರು ಅಪಘಾತದ ಹಿಂದಿನ ಮಿಸ್ಟರಿ ಏನು ಗೊತ್ತಾ?!
ಕಾರು ಅಪಘಾತವಾಗುವಾಗ ಕಾರಿನಲ್ಲಿ ದರ್ಶನ್ ಜತೆಗೆ ನಟರಾದ ದೇವರಾಜ್ ಪುತ್ರ ಪ್ರಜ್ವಲ್ ಕೂಡಾ ಇದ್ದರು. ಹಾಗಿದ್ದರೂ ಪೊಲೀಸರು ಈ ಪ್ರಕರಣದಲ್ಲಿ ಕೇವಲ ಕಾರು ಚಾಲಕ ಆಂಟೊನಿ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿರುವುದು ಬೇಕೆಂದೇ ನಟರನ್ನು ಕೋರ್ಟ್ ಕಚೇರಿ ಎಂದು ಅಲೆಯುವುದನ್ನು ತಪ್ಪಿಸಲು ಮಾಡಿದ ಪ್ಲ್ಯಾನಾ ಎಂಬ ಅನುಮಾನ ಮೂಡಿಸಿದೆ.
ವೇಗವಾಗಿ ಕಾರು ಚಾಲನೆ ಮಾಡಿದ ಆರೋಪದಲ್ಲಿ ಚಾಲಕನ ವಿರುದ್ಧ ಮಾತ್ರ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಹಾಗಿದ್ದರೂ ದರ್ಶನ್ ಅವರ ದುಬಾರಿ ಆಡಿ 7 ಕಾರು ಇದೀಗ ವಿವಿಪುರಂ ಪೊಲೀಸರ ವಶದಲ್ಲಿದ್ದು, ಅದನ್ನು ಮರಳಿ ಪಡೆಯಲು ಅವರು ಕಾನೂನಿನ ಮೊರೆ ಹೋಗಲೇಬೇಕಿದೆ.