ದುನಿಯಾ ವಿಜಯ್ ಈಗ ಖೈದಿ ನಂ.9035! ಜೈಲಿನಲ್ಲಿ ಏನ್ಮಾಡ್ತಿದ್ದಾರೆ ಕರಿಚಿರತೆ?
ಸಾಮಾನ್ಯ ಖೈದಿಗಳಂತೆ ನಟ ಹಾಗೂ ಸಹಚರರಿಗೆ ಸೌಲಭ್ಯ ಒದಗಿಸಲಾಗಿದೆ. ದುನಿಯಾ ವಿಜಯ್ ಹಾಗೂ ನಾಲ್ವರು ಸಹಚರರಿಗೆ ಯುಟಿಪಿ ಸಂಖ್ಯೆ ನೀಡಲಾಗಿದ್ದು, ವಿಜಯ್ ಈಗ ಖೈದಿ ನಂ.9035 ಆಗಿದ್ದಾರೆ.
ಈ ನಡುವೆ ದುನಿಯಾ ವಿಜಯ್ ವಿರುದ್ಧ ಹಲ್ಲೆಗೊಳಗಾದ ಮಾರುತಿ ಗೌಡ ಕುಟುಂಬ ಡಿಸಿಎಂ ಪರಮೇಶ್ವರ್ ರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ದುನಿಯಾ ವಿಜಯ್ ಜಾಮೀನಿನ ಮೇಲೆ ಹೊರಬಂದರೆ ತಮಗೆ ಆತಂಕವಿದೆ ಎಂದು ಅವರು ಹೇಳಿದ್ದಾರೆ. ಅಲ್ಲದೆ, ಹಲ್ಲೆಯಿಂದಾಗಿ ಮಾರುತಿ ಗೌಡಗೆ ಮಾರಣಾಂತಿಕ ಗಾಯವಾಗಿದ್ದು, ಪ್ರಕರಣದ ವಾದ ಮಂಡಿಸಲು ಸರ್ಕಾರಿ ಅಭಿಯೋಜಕರನ್ನು ನೇಮಿಸುವಂತೆ ಮನವಿ ಸಲ್ಲಿಸಿದ್ದಾರೆ.