ಅಪಘಾತದಲ್ಲಿ ಚಾಲೆಂಜಿಂಗ್ ದರ್ಶನ್ ಕೈಗೆ ಪೆಟ್ಟು ಬೀಳಲು ಇದುವೇ ಕಾರಣವಾಯ್ತು!
 
ಅಪಘಾತದಲ್ಲಿ ದರ್ಶನ್ ಕೈ ಮುರಿತಕ್ಕೊಳಗಾಗಿತ್ತು. ಇದೀಗ ಕೊಲಂಬಿಯಾ ಏಷಿಯಾ ಆಸ್ಪತ್ರೆಯಲ್ಲಿ ದರ್ಶನ್ ಕೈ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಅಷ್ಟಕ್ಕೂ ದರ್ಶನ್ ಕೈ ಮುರಿತಕ್ಕೊಳಗಾಗಲು ಕಾರಣವಾಗಿದ್ದು ಏನು ಗೊತ್ತಾ?
									
				ದರ್ಶನ್ ಕೈಯಲ್ಲಿ ಸದಾ ಇರುವ ಕಡಗ. ಅಪಘಾತವಾದಾಗ ಈ ಕೈ ಬಳೆ ಮುರಿದು ಒಳೆ ಸೇರಿತ್ತು. ಇದರಿಂದ ತೀವ್ರ ರಕ್ತಸ್ರಾವವಾಯಿತು ಎನ್ನಲಾಗಿದೆ. ಇದೀಗ ಶಸ್ತ್ರಚಿಕಿತ್ಸೆ ಮೂಲಕ ಕಡಗದ ಚೂರುಗಳನ್ನು ಹೊರತೆಗೆಯಲಾಗಿದೆ. ನಾನು ಆರೋಗ್ಯವಾಗಿದ್ದೇನೆ. ಯಾರೂ ಆಸ್ಪತ್ರೆ ಬಳಿಗೆ ಬಂದು ತೊಂದರೆ ಕೊಡಬೇಡಿ ಎಂದು ದರ್ಶನ್ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.