ತಮ್ಮ ಮೇಲಿನ ಹಲ್ಲೆ ಆರೋಪಕ್ಕೆ ಸಚಿವ ಚಲುವರಾಯಸ್ವಾಮಿ ಹೀಗಂದ್ರು ‌

Sampriya

ಭಾನುವಾರ, 10 ನವೆಂಬರ್ 2024 (17:04 IST)
Photo Courtesy X
ರಾಮನಗರ: ವರ್ಗಾವಣೆ ಹಣ ಹಂಚಿಕೆ ವಿಚಾರದಲ್ಲಿ  ಕಾಂಗ್ರೆಸ್ ಮುಖಂಡ ಕೀಲಾರಿ ಜಯರಾಮ ನಡುವೆ ಗಲಾಟೆ ನಡೆದು ಸಚಿವ ಚಲುವರಾಯಸ್ವಾಮಿ ಮೇಲೆ ಹಲ್ಲೆ ಮಾಡಲಾಗಿದೆ ಎಂದು ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು.

ಎಚ್‌ಡಿ ಕುಮಾರಸ್ವಾಮಿ ಹೇಳಿಕೆ ಸಂಬಂಧ ರಾಮನಗರದಲ್ಲಿ ಪ್ರತಿಕ್ರಿಯಿಸಿದ ಚಲುವರಾಯಸ್ವಾಮಿ ಅವರು ನಾನು ಎಂಗೇಜ್ಮೆಂಟ್ ಹೋಗಿದ್ದೆ. ಅಲ್ಲೇನು‌ ಗಲಾಟೆ ನಡೆದಿಲ್ಲ, ಜಯರಾಮ್ ಗೆ ನೀವು ಕೇಳಿ. ಅಂಥಾದ್ದೇನು ನಡೆದಿಲ್ಲ, ವರ್ಗಾವಣೆ ವಿಚಾರರ ಇಟ್ಟುಕೊಂಡು ಅವರು ಬಂದಿಲ್ಲ. ಕುಮಾರಸ್ವಾಮಿ ಅವರು ಚಪಲಕ್ಕೆ ಹೇಳುತ್ತಾರೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದಲಿಂಗೇಗೌಡ ದುಡ್ಡಿನ ವಿಚಾರ ಹೇಳೋದಕ್ಕೆ ಹೇಳಿ ಮೊದಲು. ಕುಮಾರಸ್ವಾಮಿ ತನ್ನ ಮಗನ ಚುನಾವಣೆ ನಿಲ್ಲಿಸಿದ್ರೂ ಚುನಾವಣೆ ಬಿಟ್ಟು ಚೆಲುವರಾಯಸ್ವಾಮಿ ಮೇಲೆ ಅವರ ಗಮನ. ಡಿಕೆ ಶಿವಕುಮಾರ್ ಹೇಳಿದ ಹಾಗೇ ಅವರಿಗೆ ಬೆಳಗಿನಿಂದ ಮಾತಾನಾಡದೇ ಹೋದ್ರೆ ನಿದ್ದೇನೆ ಬರಲ್ಲ ಎಂದು ಕುಮಾರಸ್ವಾಮಿ ವಿರುದ್ಧ ಕಿರಿಕಾರಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ