ಧಾರಾಕಾರ ಮಳೆಗೆ ಚಾಮರಾಜನಗರ ತತ್ತರ

ಶುಕ್ರವಾರ, 14 ಅಕ್ಟೋಬರ್ 2022 (18:57 IST)
ಚಾಮರಾಜನಗರದಲ್ಲಿ ಧಾರಾಕಾರ ಮಳೆಯಾದ ಹಿನ್ನೆಲೆಯಲ್ಲಿ ಜೋಡಿ ರಸ್ತೆ, ಜಿಲ್ಲಾಡಳಿತ ಭವನ ಸೇರಿದಂತೆ‌ ಕೆಲ ಬಡಾವಣೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಜಿಲ್ಲೆಯಲ್ಲಿ ಕೆಲ ದಿನಗಳಿಂದ ನಿಂತಿದ್ದ ಮಳೆರಾಯನ ಆರ್ಭಟ ಮತ್ತೆ ಶುರುವಾಗಿದೆ. ರಾತ್ರಿಯಿಂದ ಬೆಳಗ್ಗೆವರೆಗೂ ನಿರಂತರ ಮಳೆ ಸುರಿದಿದ್ದು, ನಗರದ ಜನತೆ ಪರದಾಡುವಂತಾಗಿದೆ. ಜೋರು ಮಳೆ ಬಂತು ಎಂದರೆ ಸಾಕು ಜೋಡಿ ರಸ್ತೆ ಹಾಗೂ ಜಿಲ್ಲಾಡಳಿತ ಭವನದ ಮುಂದೆ ರಸ್ತೆಗಳು ನೀರು ಹೋಗದೇ ನದಿಗಳಂತಾಗುತ್ತದೆ. ಚಾಮರಾಜನಗರ ರಸ್ತೆ ಆಗಲೀಕರಣದ ವೇಳೆ ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣ ಮಾಡಿರೋ ಆರೋಪ ಕೇಳಿ ಬಂದಿದ್ದು, ಅರ್ಧಕ್ಕೆ ನಿಂತ್ತಿರುವ ರಸ್ತೆ ಕಾಮಗಾರಿಯಿಂದ ಕಳೆದ ಮೂರು ನಾಲ್ಕು ವರ್ಷಗಳಿಂದಲ್ಲೂ ನೀರು ನಗರದ ಮುಖ್ಯ ರಸ್ತೆಗೆ‌ ನುಗ್ಗುವುದರ ಜೊತೆ ಅಂಗಡಿ ಮುಂಗಟ್ಟು ಹಾಗೂ ಕೆಲ ಬಡಾವಣೆಗಳಿಗೂ ವ್ಯಾಪಿಸುತ್ತಿದೆ. ಇನ್ನು15ನೇ ವಾರ್ಡ್​​ನ ಸೋಮಣ್ಣ ಲೇಔಟ್ ಮನೆಗಳಿಗೆ ನೀರು ನುಗ್ಗಿದ್ದು  ಮಹಿಳೆಯರು, ವೃದ್ಧರನ್ನು ಆಗ್ನಿಶಾಮಕ ದಳದ ಸಿಬ್ಬಂದಿ ಬೇರೆಡೆಗೆ ಸ್ಥಳಾಂತರ ಮಾಡಿದ್ದಾರೆ. ಬೀದಿಬದಿ ವ್ಯಾಪಾರ ಹಾಗೂ ಸಂಚಾರ ಸಂಪೂರ್ಣ ಅಯೋಮಯವಾಗಿದೆ‌.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ