ಗೃಹಲಕ್ಷ್ಮಿ ಖಾತೆಯಲ್ಲಿ ಮಹತ್ವದ ಬದಲಾವಣೆ: ಇನ್ನು ಇವರಿಗೂ ಸಿಗಲಿದೆ 2000 ರೂ

Krishnaveni K

ಸೋಮವಾರ, 16 ಡಿಸೆಂಬರ್ 2024 (09:48 IST)
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ ಒಂದಾಗ ಗೃಹಲಕ್ಷ್ಮಿ ಗ್ಯಾರಂಟಿ ಯೋಜನೆಯಲ್ಲಿ ಮಹತ್ವದ ಬದಲಾವಣೆಯೊಂದನ್ನು ಮಾಡಲಾಗಿದ್ದು, ಇನ್ನು ಮುಂದೆ ಇವರಿಗು 2000 ರೂ. ಸಿಗಲಿದೆ.

ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯ ಅನ್ವಯ ಕುಟುಂಬದ ಯಜಮಾನಿ ಖಾತೆಗೆ ಪ್ರತೀ ತಿಂಗಳು 2,000 ಕ್ರೆಡಿಟ್ ಮಾಡಲಾಗುತ್ತದೆ. ಈಗಾಗಲೇ ಹಲವು ಕಂತುಗಳನ್ನು ಹಾಕಲಾಗಿದ್ದು, ಕೆಲವರು ಇದರ ಸದುಪಯೋಗಪಡಿಸಿಕೊಂಡು ಸಾಕಷ್ಟು ಸುದ್ದಿಗಳನ್ನು ನೋಡಿದ್ದೇವೆ.

ಇದೀಗ ಗೃಹಲಕ್ಷ್ಮಿ ಯೋಜನೆಯನ್ನು ಸರ್ಕಾರ ತೃತೀಯ ಲಿಂಗಿಗಳಿಗೂ ವಿಸ್ತರಿಸಿದೆ. ಇನ್ನು ಮುಂದೆ ತೃತೀಯ ಲಿಂಗಿಗಳೂ ಮಾಸಿಕ 2,000 ರೂ. ಗೆ ಅರ್ಹರಾಗಿರುತ್ತಾರೆ. ಈಗಾಗಲೇ ಈ ಬಗ್ಗೆ ಘೋಷಣೆಯಾಗಿದ್ದರೂ ಹಣ ಬಿಡುಗಡೆ ಮಾಡಿರಲಿಲ್ಲ. ಆದರೆ ಈಗ ತೃತೀಯ ಲಿಂಗಿಗಳಿಗೂ ಹಣ ಸಂದಾಯವಾಗಿದೆ.

ರಾಜ್ಯ ಸರ್ಕಾರ ಈಗಾಗಲೇ ಉಚಿತ ಬಸ್ ಪ್ರಯಾಣದ ಅನುಕೂಲ ಒದಗಿಸುವ ಶಕ್ತಿ ಯೋಜನೆಯನ್ನು ತೃತೀಯ ಲಿಂಗಿಗಳಿಗೆ ವಿಸ್ತರಿಸಿದೆ. ಈಗ ಗೃಹಲಕ್ಷ್ಮಿ ಯೋಜನೆಯನ್ನೂ ವಿಸ್ತರಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ