Channapatna Bye Election: ನಿಖಿಲ್ ಗೆಲುವಿಗೆ ಮುಂಚೆಯೇ ಜೆಡಿಎಸ್ ಸಂಭ್ರಮಾಚರಣೆ

Krishnaveni K

ಶನಿವಾರ, 23 ನವೆಂಬರ್ 2024 (09:28 IST)
ರಾಮನಗರ: ಚನ್ನಪಟ್ಟಣ ವಿಧಾನಸಭೆ ಚುನಾವಣೆ ಮತ ಎಣಿಕೆಯಲ್ಲಿ ಕಾಂಗ್ರೆಸ್ ನ ಸಿಪಿ ಯೋಗೇಶ್ವರ್ ಮತ್ತು ಜೆಡಿಎಸ್ ನ ನಿಖಿಲ್ ಕುಮಾರಸ್ವಾಮಿ ನಡುವೆ ಭಾರೀ ಪೈಪೋಟಿಯಿದೆ. ಹಾಗಿದ್ದರೂ ಜೆಡಿಎಸ್ ಈಗಾಗಲೇ ಸಂಭ್ರಮಾಚರಣೆ ಶುರು ಮಾಡಿದೆ.

ಚನ್ನಪಟ್ಟಣ ಕ್ಷೇತ್ರ ಈ ಬಾರಿ ಭಾರೀ ಪೈಪೋಟಿ ಇದ್ದ ಕ್ಷೇತ್ರ ಎಂದೇ ನಿರೀಕ್ಷಿಸಲಾಗಿತ್ತು. ಅದರಂತೆಯೇ ಈಗ ಮುನ್ನಡೆಯೂ ನಡೆಯುತ್ತಿದೆ. ಒಮ್ಮೆ ಯೋಗೇಶ್ವರ್ ಮುನ್ನಡೆಯಲ್ಲಿದ್ದರೆ ಇನ್ನೊಂದೆಡೆ ನಿಖಿಲ್ ಮುನ್ನಡೆ ಗಳಿಸುತ್ತಿದ್ದಾರೆ. ಪೈಪೋಟಿ ಎನ್ನುವುದಕ್ಕೆ ಮತ್ತೊಂದು ಅರ್ಥವೆನೋ ಎಂಬಂತೆ ಇಲ್ಲಿ ಎಣಿಕೆ ನಡೆಯುತ್ತಿದೆ.

ಹಾಗಿದ್ದರೂ ಈ ಕ್ಷೇತ್ರದಲ್ಲಿ ಒಕ್ಕಲಿಗ ಮತಗಳು ನಿರ್ಣಾಯಕವಾಗಿದ್ದು, ಹೀಗಾಗಿ ಜೆಡಿಎಸ್ ನಾವೇ ಗೆಲ್ಲೋದು ಎಂದು ಸಂಭ್ರಮಾಚರಣೆ ಶುರು ಮಾಡಿದ್ದಾರೆ. ರಾಮನಗರದ ವೋಟ್ ಕೌಂಟಿಂಗ್ ಕೇಂದ್ರದ ಬಳಿಕ ಜೆಡಿಎಸ್ ಕಾರ್ಯಕರ್ತರು ಕುಣಿದು ಕುಪ್ಪಳಿಸುತ್ತಿದ್ದಾರೆ.

ಇತ್ತೀಚೆಗಿನ ವರದಿ ಪ್ರಕಾರ ನಿಖಲ್ ಸಾವಿರ ಮತಗಳ ಅಂತರದಲ್ಲಿ ಮುನ್ನಡೆಯಲ್ಲಿದ್ದಾರೆ. ಆರಂಭಿಕ ಹಂತದಲ್ಲಿ ಯೋಗೇಶ್ವರ್ ಮುನ್ನಡೆಯಲ್ಲಿದ್ದರು. ಹೀಗಾಗಿ ಫಲಿತಾಂಶ ಏನು ಬೇಕಾದರೂ ಆಗಬಹುದು ಎನ್ನುವ ಫೈಟ್ ಇದೆ. ಆದರೆ ಜೆಡಿಎಸ್ ನಾವೇ ಗೆದ್ದಿದ್ದೇವೆ ಎಂದು ಈಗಲೇ ಸಂಭ್ರಮಾಚರಣೆ ಶುರು ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ