ರಾಜ್ಯದಲ್ಲಿ ಎಸೆತ್ತಿರುವ ಕೇರಳದ ಕೋಳಿ ತ್ಯಾಜ್ಯ?

ಶುಕ್ರವಾರ, 13 ಜುಲೈ 2018 (12:24 IST)
ಕೇರಳ ರಾಜ್ಯದಿಂದ ಲಾರಿಯಲ್ಲಿ ತಂದು ಕೋಳಿ ತಾಜ್ಯ ಎಸೆಯುತ್ತಿರುವ  ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಇದರಿಂದ ಹಲವು ಅನುಮಾನಗಳು ಜನರನ್ನು ಕಾಡಲಾರಂಭಿಸಿದೆ. ಪದೇ ಪದೇ ಕೋಳಿ ತ್ಯಾಜ್ಯವನ್ನು ಲಾರಿಗಟ್ಟಲೇ ತಂದು ಎಲ್ಲೆಂದರಲ್ಲಿ ಎಸೆದು ಹೋಗುತ್ತಿರುವುದರಿಂದ ರೋಸಿ ಹೋಗಿರುವ ಸ್ಥಳೀಯರು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. 

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ರೆಂಜ  ಎಂಬಲ್ಲಿ ಲಾರಿ ಯೊಂದರಲ್ಲಿ  ತುಂಬಿಸಿ  ತಂದಿದ್ದ  ಕೋಳಿ  ತಾಜ್ಯವನ್ನು ಅಪರಿಚಿತ  ವ್ಯಕ್ತಿಗಳು ರಸ್ತೆ ಬದಿ ಎಸೆದು ಹೋಗಿದ್ದು  ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ. ಕಳೆದ ಕೆಲವು ದಿನಗಳಿಂದ ಭಾರಿ ಮಳೆಯಾಗುತ್ತಿರುವುದರಿಂದ ಈ ರೀತಿ ಕೋಳಿ ತಾಜ್ಯಗಳನ್ನು  ರಸ್ತೆ ಬದಿ ಎಸೆದು ಹೋಗುವುದರಿಂದ  ಸಾಂಕ್ರಾಮಿಕ  ರೋಗಗಳು  ಹರಡುವ  ಭೇಟಿ ಉಂಟಾಗಿದೆ. ಕಳೆದ ಕೆಲವು ತಿಂಗಳುಗಳಿಂದ ಇದೇ ರೀತಿ ಅರ್ಲಪದವು  ಪಾಣಾಜೆ,  ಬೆಟ್ಟಂಪಾಡಿ,  ಬೇಂದ್ರ ತೀರ್ಥ ಮುಂತಾದ ಕಡೆಗಳಲ್ಲಿ ರಾತ್ರಿ ವೇಳೆ ಬಂದು ಲಾರಿ ಯಲ್ಲಿ ಕೋಳಿ ತಾಜ್ಯ  ತಂದು ಎಸೆಯಲಾಗುತ್ತಿದ್ದು,  ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.

ಈ ಬಗ್ಗೆ ಸ್ಥಳೀಯರು ಪುತ್ತೂರು ಗ್ರಾಮಾಂತರ  ಠಾಣೆಗೆ  ದೂರು ನೀಡಿದ್ದಾರೆ. ಇಂದು ಮತ್ತೆ ಲಾರಿ ಯಲ್ಲಿ  ಕೋಳಿ ತಾಜ್ಯ ತಂದು ರೆಂಜದಲ್ಲಿ ಎಸೆಯಲಾಗಿದ್ದು , ಸ್ಥಳೀಯರು ಅವರನ್ನು ತರಾಟೆಗೆ  ತೆಗೆದು ಕೊಂಡಿದ್ದಾರೆ. ಅಲ್ಲದೆ ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಕೇರಳ ರಾಜ್ಯದಿಂದ ಲಾರಿ ಯಲ್ಲಿ ತಂದು ಕೋಳಿ ತಾಜ್ಯ ಎಸೆಯುತ್ತಿರುವ  ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
 
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ